ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿಯಾಗಲಿ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಧರ್ಮೋಕ್ರಸಿ ಬದಿಗೆ ಸರಿಸಿ ಡೆಮೊಕ್ರಸಿಯನ್ನು ಉಳಿಸಲಿ. ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಡೆಮೊಕ್ರಸಿ ಉಳಿಸಲಿ ಎಂದು ಹಂಸಲೇಖ ಹೇಳಿದ್ದಾರೆ.
ನಾನು ಭಯಪಡುವವನಲ್ಲ, ಮಾಗಡಿ ರೋಡ್ ನಲ್ಲಿ ಆಟವಾಡಿ ಬೆಳೆದವನು. ನನಗೆ ಈಗ ಎಪ್ಪತ್ತು. ತಿನ್ನುವುದು ಒಪ್ಪತ್ತು. ಯರೇಬೇವು ಪುಸ್ತಕ ದೇಸಿ ಸಮುದಾಯದ ಕರುಳಿನ ಕಥೆಯಾಗಿದೆ. ನಮ್ಮದು ಕೂಡ ಅದೇ ರೀತಿಯ ಕರುಳಿನ ಕತೆಯಾಗಿದೆ ಎಂದು ಹಂಸಲೇಖ ಹೇಳಿದ್ದಾರೆ.
ಈಚೆಗೆ ಒಂದು ವಿಚಾರದಲ್ಲಿ ಗೊತ್ತಿಲ್ಲದ ಸಮುದಾಯಗಳೆಲ್ಲ ಬೆಂಬಲ ನೀಡಿದವು. ಹೀಗೆಲ್ಲಾ ಆಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ನನ್ನ ಬೆಂಬಲಕ್ಕೆ ನಿಂತವರು ಎಸ್.ಜಿ. ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನನ್ನ ದೇಶಿ ಶಾಲೆಗೆ ಸಹಾಯ ಮಾಡಿದ್ದರು ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.