ಇಡೀ ದೇಶ ಉಷ್ಣ ಮಾರುತ ತಂದೊಡ್ಡಿರುವ ಸೆಕೆಯಿಂದ ಬಳಲುತ್ತಿದೆ. ಆದರೆ ಜನಪ್ರಿಯ ಕಾಮೆಡಿಯನ್ ಹಾಗೂ ಟಿವಿ ನಿರೂಪಕ ಡ್ಯಾನಿಶ್ ಸೇಟ್ ಪಾಲಿಗೆ ಈ ಕಡು ಸೆಕೆ ಕೂಡ ಹಾಸ್ಯಕ್ಕೊಂದು ವಸ್ತುವಾಗಿದೆ. ಅದರಲ್ಲೂ ಅವರು ಶೇಕ್ಸ್ ಪಿಯರ್‌ನ ಜನಪ್ರಿಯ ನಾಟಕಗಳನ್ನು ಸೆಕೆಯ ಜತೆಗೆ ಸಮೀಕರಿಸಿ ಮಾಡುತ್ತಿರುವ ಕೆಲವು ಪನ್‌ಗಳು ಈಗ ಸಖತ್ ಮನರಂಜನೆ ನೀಡುತ್ತಿವೆ.
ಬಿಸಿಲಿನ ಝಳ ಹಲವು ರಾಜ್ಯಗಳಲ್ಲಿ ಜನ ಜೀವನವನ್ನು ಹೈರಾಣಾಗಿಸಿದೆ. ಇಂಥ ಸಂದರ್ಭದಲ್ಲಿ ದೇಹದ ಜೊತೆಗೆ ಮನಸ್ಸನ್ನೂ ತಂಪುಗೊಳಿಸುವ ದಾರಿಗಳನ್ನು ಜನರು ಹುಡುಕುತ್ತಿದ್ದಾರೆ. ಡ್ಯಾನಿಶ್ ಸೇಟ್ ಫನ್‌ಗಳು ‘ಪನ್‌ಡಿತ’ ಪಾಮರರಿಗೆಲ್ಲ ಇಂಥ ತಂಪನ್ನೆರೆಯುತ್ತಿವೆ. ದೈನಂದಿನ ಬದುಕಿನ ಜಂಜಾಟಗಳಿಗೆ ಹಾಸ್ಯದ ಸ್ಪರ್ಶ ನೀಡುವ ಮೂಲಕ ಜನರಿಗೆ ಕಚಗುಳಿ ಇಡುತ್ತಿರುವ ಸಾಮಾಜಿಕ ಜಾಲತಾಣಗಳ ಕಾಮೆಡಿಯನ್ ಡ್ಯಾನಿಶ್ ಸೇಟ್ ಸೆಕೆಗೂ ಶೇಕ್ಸ್ ಪಿಯರ್ ಸ್ಪರ್ಶವನ್ನು ಅನನ್ಯ ರೀತಿಯಲ್ಲಿ ನೀಡಿದ್ದಾರೆ.
ಕೆಲಸದ ನಿರೀಕ್ಷೆಯಲ್ಲಿದ್ದ SSLC, PUC, ಪದವೀಧರರಿಗೆ ಗುಡ್ ನ್ಯೂಸ್
“con-pun-sation” ಇದು ಡ್ಯಾನಿಶ್ ಸೇಟ್ ಅವರ ಪನ್ ಚಾತುರ್ಯದ ಒಂದು ಸ್ಯಾಂಪಲ್. ಬೇಸಿಗೆ ಅಥವಾ ಉಷ್ಣ ಮಾರುತವನ್ನು ಪಾಶ್ಚಾತ್ಯ ಕವಿಗಳು ಗ್ರೀಷ್ಮ ಗಾನ ಎಂದೆಲ್ಲ ವರ್ಣಿಸಿರಬಹುದು. ಆದರೆ ಡ್ಯಾನಿಶ್ ಶೇಟ್ ಪ್ರಕಾರ ಉಷ್ಣ ಮಾರುತಕ್ಕೂ ಶೇಕ್ಸ್‌ಪಿಯರ್ ನಾಟಕಗಳಿಗೂ ಹತ್ತಿರದ ಸಂಬಂಧವಿದೆ.
ಈ ಬಿಸಿಲಿನಲ್ಲಿ ನಾನು ಕಾರಿನ ಬಾನೆಟ್ ಮೇಲೆಯೇ ‘ಆಮ್ಲೆಟ್’ ಮಾಡಿಕೊಂಡಿದ್ದೇನೆ ಸರ್ ಎನ್ನುತ್ತಾರೆ ಡ್ಯಾನಿಶ್. ಪ್ರತಿ ದಿನ ಮೂರು ಹೊತ್ತು ನಾನು ‘ಮ್ಯಾಕ್ ಬಾತ್’ ಮಾಡುತ್ತಿದ್ದೇನೆ ಎಂದು ವಿಡಿಯೋ ಒಂದರಲ್ಲಿ ಡ್ಯಾನಿಶ್ ಹೇಳಿರುವುದು ಖುಷಿ ಕೊಡುತ್ತದೆ. ಹೀಗೆ ಸುಡುವ ಸೆಕೆಗೆ ಶೇಕ್ಸ್ ಪಿಯರ್ ಟಚ್ ಕೊಟ್ಟಿರುವ ನೂರಾರು ಪನ್‌ಗಳು ಡ್ಯಾನಿಶ್ ಬತ್ತಳಿಕೆಯಲ್ಲಿವೆ. ಈಗಾಗಲೇ ಅವರ ಪನ್‌ಗಳು 30,000ಕ್ಕೂ ಅಧಿಕ ವೀಕ್ಷಕರನ್ನು ಗಳಿಸಿಕೊಂಡಿವೆ. ನೆಟ್ಟಿಗರು ‘ಅದ್ಭುತ’, ‘ತಮಾಷೆಯಾಗಿದೆ’, ’ಖುಷಿಕೊಡುತ್ತಿದೆ’….. ಎಂದೆಲ್ಲ ಟ್ವೀಟ್ ಮತ್ತು ರಿಟ್ವೀಟ್‌ಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.