ಇಸ್ರೇಲ್ : ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಯುದ್ಧ ಮುಂದುವರೆದಿದ್ದು, ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಿದ್ರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಹಮಾಸ್ ಉಗ್ರರು ಬೆದರಿಕೆ ಹಾಕಿದ್ದಾರೆ.
ಇಸ್ರೇಲ್ ನ ಸೇನೆಯು ಯಾವುದೇ ಪೂರ್ವ ಎಚ್ಚರಿಕೆಯಿಲ್ಲದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಇಸ್ರೇಲ್ನ ಒತ್ತೆಯಾಳುಗಳನ್ನು ಕೊಲ್ಲುತ್ತೇವೆ ಎಂದು ಪ್ಯಾಲೆಸ್ತೀನ್ನ ಹಮಾಸ್ ಎಚ್ಚರಿಕೆ ನೀಡಿದೆ. ನಮ್ಮಲ್ಲಿ ಒಬ್ಬರನ್ನು ಹತ್ಯೆ ಮಾಡಿದರೂ ಒತ್ತೆಯಾಳಾಗಿರುವವರಲ್ಲಿ ಒಬ್ಬರ ಪ್ರಾಣ ಹೋಗುತ್ತದೆ, ನಮ್ಮ ಶತ್ರುಗಳಿಗೆ ನೈತಿಕತೆಯ ಭಾಷೆ ಅರ್ಥವಾಗುವುದಿಲ್ಲ, ಆದ್ದರಿಂದ ಅವರಿಗೆ ಅರ್ಥವಾಗುವ ಭಾಷೆಯಲ್ಲೇ ನಾವು ಉತ್ತರಿಸುತ್ತೇವೆ ಎಂದು ಹಮಾಸ್ ಹೇಳಿದೆ.
ಹಮಾಸ್ ಉಗ್ರರ ದಾಲಿಗೆ ಈವರೆಗೆ ಇಸ್ರೇಲ್ ನ 900 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಯಾಗಿ ಇರಿಸಿಕೊಂಡಿದೆ.
ಫೆಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ ವಿದೇಶಿಯರು ಕೊಲ್ಲಲ್ಪಟ್ಟಿದ್ದಾರೆ, ಗಾಯಗೊಂಡಿದ್ದಾರೆ ಅಥವಾ ಒತ್ತೆಯಾಳುಗಳಾಗಿದ್ದಾರೆ. ಕಾಣೆಯಾದ ಅನೇಕ ವಿದೇಶಿಯರು ದಕ್ಷಿಣ ಇಸ್ರೇಲಿ ಮರುಭೂಮಿಯಲ್ಲಿ ನಡೆದ ಎಲೆಕ್ಟ್ರಾನಿಕ್ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದರು, ಅಲ್ಲಿ 260 ಕ್ಕೂ ಹೆಚ್ಚು ಹತ್ಯೆ ಮಾಡಲಾಯಿತು.