ಕೋವಿಡ್ ಸೋಂಕು ವಾಸಿಯಾಗಲಿ ಎಂದು ಆಸ್ಪತ್ರೆಗೆ ದಾಖಲಾಗುವ ಪ್ರತಿ ಇಬ್ಬರು ಮಂದಿಯಲ್ಲಿ ಒಬ್ಬರಿಗೆ ಬೇರೊಂದು ರೀತಿಯ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತವೆ ಎಂದು ಬ್ರಿಟನ್‌ನ ಸಂಶೋಧಕರ ತಂಡವೊಂದರ ಅಧ್ಯಯನ ವರದಿಯಿಂದ ತಿಳಿದುಬಂದಿದೆ.
50 ವರ್ಷ ಮೇಲ್ಪಟ್ಟ ಮಂದಿಯಲ್ಲಿ ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿದ್ದರೂ ಸಹ, 19-29 ವರ್ಷಗಳ ನಡುವಿನ ಮಂದಿಯಲ್ಲೂ 27% ಜನರಲ್ಲಿ ಕೋವಿಡ್‌ಗೆಂದು ಆಸ್ಪತ್ರೆಗೆ ದಾಖಲಾದ ವೇಳೆ ದೇಹದ ಮತ್ತೊಂದು ಅಂಗಕ್ಕೆ ಹಾನಿಯಾಗಿರುವುದು ಕಂಡುಬಂದಿದೆ. ಇದೇ ರೀತಿಯ ಸಮಸ್ಯೆಗಳನ್ನು 30-39 ವರ್ಷ ವಯಸ್ಸಿನ ನಡುವಿನ ಕೋವಿಡ್ ಪೀಡಿತರ ಪೈಕಿ 37% ಮಂದಿಯಲ್ಲಿ ಕಂಡುಬರುತ್ತಿದೆ ಎಂದು ಸಂಶೋಧಕರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಈ ಸ್ಥಳಕ್ಕೆ ಭೇಟಿ ನೀಡಿ ಸೋಂಕು ತಗುಲಿಸಿಕೊಂಡ್ರಾ ರಿಷಬ್ ಪಂತ್..?
“ಈ ಸಮಸ್ಯೆಯ ವಿರುದ್ಧ ಇರುವ ಉತ್ತಮ ಅಸ್ತ್ರವೆಂದರೆ ಲಸಿಕೆ ಪಡೆಯುವುದು’’ ಎಂದು ಲಿವರ್‌ಪೂಲ್ ವಿವಿಯ ಮಕ್ಕಳ ಆರೋಗ್ಯ ಹಾಗೂ ಮದ್ದುಗಳ ವಿಭಾಗದ ಪ್ರಾಧ್ಯಾಪಕ ಕಾಲಮ್ ಸೆಂಪಲ್ ತಿಳಿಸಿದ್ದಾರೆ.