ಬೆಂಗಳೂರು: ಈ ಹಿಂದೆ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದ ಮುರುಗೇಶ್ ನಿರಾಣಿ ಬಡವರು ಮತ್ತು ಜನಸಾಮಾನ್ಯರಿಗೆ ಮನೆ ನಿರ್ಮಿಸಲು ಅನುಕೂಲವಾಗುವಂತೆ ಉಚಿತವಾಗಿ ಮರಳು ನೀತಿ ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಆದರೆ, ಉಚಿತವಾಗಿ ನೀಡುವ ಪ್ರಸ್ತಾಪ ಹೊಸ ಮರಳು ನೀತಿಯಲ್ಲಿ ಇಲ್ಲವೆನ್ನಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಹೊಸ ಮರಳು ನೀತಿಯಲ್ಲಿ ಉಚಿತವಾಗಿ ಮರಳು ನೀಡುವ ಕುರಿತಾದ ಯಾವುದೇ ಪ್ರಸ್ತಾಪವಿಲ್ಲ. ಈ ಹಿಂದೆ ಈ ಖಾತೆಯನ್ನು ನಿರ್ವಹಿಸಿದ್ದ ಸಚಿವರು ಯಾಕೆ ಆ ರೀತಿ ಹೇಳಿದ್ದರು ಎನ್ನುವುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಬೇಡಿಕೆಗಿಂತ ಸುಮಾರು ಒಂದು ಕೋಟಿ ಟನ್ ನಷ್ಟು ಮರಳು ಕೊರತೆ ಇದ್ದು, ಈ ನಿಟ್ಟಿನಲ್ಲಿ ಎಂಸ್ಯಾಂಡ್ ಹೆಚ್ಚಳ ಸೇರಿದಂತೆ ಬೇರೆ ಪರಿಹಾರ ಕ್ರಮಗಳ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.