alex Certify ‘ಹಲಾಲ್’‌ ಸರ್ಟಿಫಿಕೇಟ್ ಎಂದರೇನು ? ಇಲ್ಲಿದೆ ಈ‌ ಕುರಿತಾದ ಫುಲ್‌ ಡಿಟೇಲ್ಸ್…‌! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಲಾಲ್’‌ ಸರ್ಟಿಫಿಕೇಟ್ ಎಂದರೇನು ? ಇಲ್ಲಿದೆ ಈ‌ ಕುರಿತಾದ ಫುಲ್‌ ಡಿಟೇಲ್ಸ್…‌!

ಹಲಾಲ್ ವಿವಾದ ಮತ್ತೆ ಭುಗಿಲೆದ್ದಿದೆ. ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ಕೆಲ ಸಂಘಟನೆಗಳು ಅಕ್ರಮ ಎಸಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಹಲಾಲ್ ಸರ್ಟಿಫಿಕೇಟ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ಖುದ್ದು ಸಿಎಂ ಯೋಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ವಾಸ್ತವವಾಗಿ ಯುಪಿಯ ಕೆಲವು ಕಂಪನಿಗಳು ಹಲಾಲ್ ಪ್ರಮಾಣೀಕರಣದ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದವು. ಡೈರಿ, ಜವಳಿ, ಸಕ್ಕರೆ, ತಿಂಡಿಗಳು, ಮಸಾಲೆಗಳು ಮತ್ತು ಸಾಬೂನು ಕೂಡ ಹಲಾಲ್ ಎಂದು ಪ್ರಮಾಣೀಕರಿಸಲ್ಪಟ್ಟವು. ಯುಪಿ ಸರ್ಕಾರ ಈ ಅಕ್ರಮಕ್ಕೆ ಬ್ರೇಕ್‌ ಹಾಕಲು ಕಠಿಣ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದೆ.

ಹಲಾಲ್ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಜಮಿಯತ್ ಉಲೇಮಾ ಹಿಂದ್ ಹಲಾಲ್ ಟ್ರಸ್ಟ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಹಲಾಲ್ ಪ್ರಮಾಣೀಕರಣ ಎಂದರೇನು? ಯಾವ ಉತ್ಪನ್ನಗಳಿಗೆ ಅದನ್ನು ನೀಡಲಾಗುತ್ತದೆ? ಯಾವ ಸಂಸ್ಥೆಗಳು ಹಲಾಲ್ ಪ್ರಮಾಣಪತ್ರವನ್ನು ನೀಡುತ್ತವೆ ಎಂಬುದನ್ನು ವಿವರವಾಗಿ ನೋಡೋಣ.

ಹಲಾಲ್ ಪ್ರಮಾಣಪತ್ರ ಎಂದರೇನು ?

ಮಾಂಸಾಹಾರಿ ಉತ್ಪನ್ನಗಳಿಗೆ ಹಲಾಲ್ ಪ್ರಮಾಣಪತ್ರ ನೀಡಲಾಗುತ್ತಿತ್ತು. 1993ರವರೆಗೆ ಹಲಾಲ್ ಪ್ರಮಾಣಪತ್ರವು ಮಾಂಸದ ಉತ್ಪನ್ನಗಳಿಗೆ ಮಾತ್ರ ಅನ್ವಯಿಸುತ್ತಿತ್ತು. ಆದರೆ ನಂತರ ಇದನ್ನು ಸೌಂದರ್ಯವರ್ಧಕಗಳು, ಔಷಧಗಳು ಇತ್ಯಾದಿಗಳಿಗೆ ಅನ್ವಯಿಸಲು ಪ್ರಾರಂಭಿಸಲಾಯ್ತು. ಹಲಾಲ್ ಎಂದರೆ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ತಯಾರಿಸಿದ ಉತ್ಪನ್ನಗಳು ಎಂದರ್ಥ.

ಹಲಾಲ್ ಪ್ರಮಾಣಪತ್ರವನ್ನು ಯಾರು ನೀಡುತ್ತಾರೆ ?

ಇಸ್ಲಾಮಿಕ್ ದೇಶಗಳಲ್ಲಿ, ಇಸ್ಲಾಮಿಕ್ ಸಂಸ್ಥೆಗಳು ಹಲಾಲ್ ಪ್ರಮಾಣಪತ್ರವನ್ನು ನೀಡುತ್ತವೆ. ಭಾರತದಲ್ಲಿ ಸುಮಾರು 12 ಕಂಪನಿಗಳು ಪ್ರಮಾಣಪತ್ರ ನೀಡುತ್ತವೆ. ಇಸ್ಲಾಮಿಕ್ ಕಾನೂನುಗಳ ಅಡಿಯಲ್ಲಿ ಪ್ರಮಾಣೀಕರಣವನ್ನು ಮಾಡಲಾಗುತ್ತದೆ. ಭಾರತದಲ್ಲಿ ಪ್ರಮಾಣೀಕರಣವನ್ನು ಒದಗಿಸುವ ಸಂಸ್ಥೆಗಳೆಂದರೆ ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಲಾಲ್ ಸರ್ಟಿಫಿಕೇಶನ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜಮಿಯತ್ ಉಲಮಾ-ಎ-ಹಿಂದ್ ಮತ್ತು ಜಮಿಯತ್ ಉಲಮಾ-ಎ-ಹಿಂದ್ ಹಲಾಲ್ ಟ್ರಸ್ಟ್.

ಹಲಾಲ್ ಪ್ರಮಾಣೀಕರಣದ ಅವಶ್ಯಕತೆ ಏನು ?

ಉತ್ಪನ್ನಗಳ ಹಲಾಲ್ ಪ್ರಮಾಣೀಕರಣದ ನಂತರ ಇಸ್ಲಾಮಿಕ್ ದೇಶಗಳಿಗೆ ಇವುಗಳ ರಫ್ತು ಸುಲಭವಾಗುತ್ತದೆ. ಅನೇಕ ಇಸ್ಲಾಮಿಕ್ ದೇಶಗಳಲ್ಲಿ ಹಲಾಲ್ ಉತ್ಪನ್ನಗಳಿಗೆ ಮಾತ್ರ ಅನುಮತಿಸಲಾಗಿದೆ. ಹಲಾಲ್ ಉತ್ಪನ್ನಗಳು ಜಾಗತಿಕ ಆಹಾರ ಮಾರುಕಟ್ಟೆಯಲ್ಲಿ ಸುಮಾರು 19 ಪ್ರತಿಶತದಷ್ಟಿವೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...