ದೇಶದಲ್ಲೇ ಉತ್ಪಾದನೆಯಾದ ಮೊದಲ ಸ್ಥಿರ ರೆಕ್ಕೆಗಳ ವಿಮಾನ ಹಿಂದೂಸ್ತಾನ್-228 ತನ್ನ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ.
ಈ ಪುಟ್ಟ ವಿಮಾನದ ನೆಲದ ಓಟ ಹಾಗೂ ಕಡಿಮೆ ವೇಗದ ಟ್ಯಾಕ್ಸಿ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ ಎಂದು ಎಚ್‌ಎಎಲ್ ತಿಳಿಸಿದ್ದು, ಡಿಜಿಸಿಎಯ ಪ್ರಮಾಣ ಪತ್ರ ಪಡೆಯುವುದು ಬಾಕಿ ಇದೆ.
ದಲಿತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ
19 ಸೀಟುಗಳ ಬಹೋಪಯೋಗಿ ವಿಮಾನವಾದ ಹಿಂದೂಸ್ತಾನ್-228 ವಿಮಾನವು ವಿಐಪಿ ಪ್ರಯಾಣ, ಸಾರ್ವಜನಿಕರ ಪ್ರಯಾಣ, ಏರ್ ಆಂಬುಲೆನ್ಸ್, ಮೋಡ ಬಿತ್ತನೆಗಳಲ್ಲದೇ ಪ್ಯಾರಾ ಜಂಪಿಂಗ್, ವೈಮಾನಿಕ ಸರ್ವೇಕ್ಷಣೆ, ಛಾಯಾಗ್ರಹಣ ಹಾಗೂ ಸರಕು ಸಾಗಾಟದಂಥ ಕೆಲಸಗಳಿಗೆ ಸೂಕ್ತವಾಗಿದೆ ಎಂದು ಎಚ್‌ಎಎಲ್ ತಿಳಿಸಿದೆ.