
ಸುಂದರವಾಗಿ ಕಾಣಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಹುಡುಗಿಯರು ಅದ್ರಲ್ಲಿ ಮುಂದು. ಹೊಸ ವರ್ಷ ಹತ್ತಿರ ಬರ್ತಿದ್ದಂತೆ ಪಾರ್ಟಿಗಳಿಗೆ ಈಗಾಗಲೇ ಹುಡುಗಿಯರು ಸಿದ್ಧವಾಗ್ತಿದ್ದಾರೆ. ಬ್ಯೂಟಿಪಾರ್ಲರ್ ಗಳ ಮುಂದೆ ಹುಡುಗಿಯರ ಸಾಲಿದೆ.
ಈ ಬಾರಿ ಪಾರ್ಟಿಯಲ್ಲಿ ಸ್ವಲ್ಪ ಡಿಫರೆಂಟ್ ಆಗಿ ಕಾಣಬೇಕೆಂದ್ರೆ ಕೂದಲಿನ ಬಗ್ಗೆ ಹೆಚ್ಚು ಗಮನ ನೀಡಿ. ನಿಮ್ಮ ಕೂದಲಿಗೆ ಹೇರ್ ರಿಂಗ್ ಬಳಸಿ ಡಿಸೈನ್ ಮಾಡಿ, ಎಲ್ಲರನ್ನು ಆಕರ್ಷಿಸಿ.
ಇತ್ತೀಚಿನ ದಿನಗಳಲ್ಲಿ ಹೇರ್ ರಿಂಗ್ ಬಳಕೆ ಫ್ಯಾಷನ್ ಆಗಿದೆ. ಕೂದಲು ಸ್ವಲ್ಪ ಉದ್ದವಿದ್ದರೂ ನೀವು ಹೇರ್ ರಿಂಗ್ ಬಳಸಿ ಕೂದಲ ಸೌಂದರ್ಯವನ್ನು ಇಮ್ಮಡಿ ಮಾಡಬಹುದು. ಮೊದಲು ಸಣ್ಣದಾಗಿ ಜಡೆ ಹಾಕಿಕೊಳ್ಳಿ. ನಂತ್ರ ಅದಕ್ಕೆ ಹೇರ್ ರಿಂಗ್ ಹಾಕುತ್ತ ಬನ್ನಿ.
ಹಿಂದೆ ಮಾತ್ರ ಜಡೆ ಹಾಕಬೇಕಾಗಿಲ್ಲ. ಸೈಡಿನಲ್ಲಿ ಸಣ್ಣ ಜಡೆ ಹಾಕಬಹುದು. ಮುಂದೆ ಹಾಕಬಹುದು.ನಿಮಗೆ ಇಷ್ಟವಾಗುವ ಕಡೆ ಜಡೆ ಹಾಕಿ ಅದಕ್ಕೆ ಹೇರ್ ರಿಂಗ್ ಹಾಕಬಹುದು. ಕೂದಲಿಗೆ ಕಲರಿಂಗ್ ಮಾಡಿದ್ರೆ ಅದಕ್ಕೆ ಹೊಂದುವ ಹೇರ್ ರಿಂಗ್ ಆಯ್ಕೆ ಮಾಡಿಕೊಳ್ಳಿ.
ಹೇರ್ ರಿಂಗ್ ನಿಮ್ಮ ಕೂದಲಿಗೆ ಯಾವುದೇ ಹಾನಿ ಮಾಡುವುದಿಲ್ಲ. ಇದನ್ನು ಹಾಕಿಕೊಳ್ಳುವುದು ಕೂಡ ತುಂಬಾ ಸುಲಭ.
ಹೇರ್ ರಿಂಗ್ ಬಳಕೆಯಿಂದ ಕೂದಲು ಉದುರುತ್ತೆ ಎಂಬ ಭಯ ಬೇಡ. ರಾತ್ರಿ ಮಲಗುವ ಮೊದಲು ಇದನ್ನು ತೆಗೆದು ಮಲಗಿ.