
ಆಂಧ್ರಪ್ರದೇಶದ ವಿಜಯನಗರಂನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ SI ಮೇಲೆ ಮದ್ಯದ ಅಮಲಿನಲ್ಲಿ ದುರ್ವರ್ತನೆ ತೋರಿದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ನಡೆದ ಈ ಘಟನೆಯಲ್ಲಿ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ. ದುಷ್ಕರ್ಮಿಗಳು ಗಾಂಜಾ ಸೇವಿಸಿ ದುರ್ವರ್ತನೆ ತೋರುತ್ತಿದ್ದರು ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಘಟನೆಯ ವೀಡಿಯೊದಲ್ಲಿ, ದುಷ್ಕರ್ಮಿಗಳು ಮಹಿಳಾ ಸಬ್ ಇನ್ಸ್ ಪೆಕ್ಟರ್ ಕೂದಲನ್ನು ಹಿಡಿದು ಎಳೆದು ಬೈಯುತ್ತಿರುವುದು ಕಂಡುಬರುತ್ತದೆ. ಈ ಹಲ್ಲೆಯಿಂದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಗೆ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
‘ಡಾನ್ಸ್ ಬೇಬಿ ಡಾನ್ಸ್’ ಕಾರ್ಯಕ್ರಮದಲ್ಲಿ ಹಲ್ಲೆ
ಒಂದು ಜಾತ್ರೆಯಲ್ಲಿ ‘ಡಾನ್ಸ್ ಬೇಬಿ ಡಾನ್ಸ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಕೆಲವು ಯುವಕರು ನೃತ್ಯಗಾರ್ತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಕರ್ತವ್ಯದಲ್ಲಿದ್ದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಅಲ್ಲಿಗೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆಗ ಆ ಯುವಕರು ಹಲ್ಲೆ ಮಾಡಿದ್ದಾರೆ.
ಪೊಲೀಸರಿಂದ ಒಂಬತ್ತು ಜನರ ಬಂಧನ
ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ದುಷ್ಕರ್ಮಿಗಳನ್ನು ಹಿಡಿಯಲು ತಂಡವನ್ನು ರಚಿಸಿದ್ದು, ಆ ದುಷ್ಕರ್ಮಿಗಳು ವೈಎಸ್‌ಆರ್‌ಸಿಪಿ ಯುವ ಮುಖಂಡರ ಮನೆಯಲ್ಲಿ ಅಡಗಿಕೊಂಡಿದ್ದರು. ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದಾರೆ, ಒಬ್ಬ ಆರೋಪಿ ಮಾತ್ರ ತಲೆಮರೆಸಿಕೊಂಡಿದ್ದಾನೆ.
#AndhraPradesh: Female Cop Attacked by Intoxicated Youths in Vizianagaram
In a disturbing incident, a woman Sub-Inspector (SI), Devi, was physically assaulted and abused by a group of intoxicated youths at the Gudivada village fair in Vizianagaram, Andhra Pradesh.
The… pic.twitter.com/QtZHO524PN
— South First (@TheSouthfirst) March 13, 2025