ಚಳಿಗಾಲ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ನಿಮ್ಮ ಕೇಶದ ಆರೈಕೆ ನಿಮಗೆ ಸವಾಲಾಗಿದೆಯೇ….. ನೆಲ್ಲಿಕಾಯಿಯಿಂದ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಎರಡು ನೆಲ್ಲಿಕಾಯಿಯನ್ನು ಸಣ್ಣಗೆ ಕತ್ತರಿಸಿ, ಅರ್ಧ ಕಪ್ ಮೊಸರಿನಲ್ಲಿ ಬೆರೆಸಿ. ನಾಲ್ಕು ಚಮಚ ಮೆಂತೆ ಕಾಳು ಮತ್ತು ಒಂದು ಮುಷ್ಠಿ ಕರಿ ಬೇವಿನ ಎಲೆ ಸೇರಿಸಿ. ಇವೆಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿ. ತಲೆಗೆ ಹಚ್ಚಿ. ಎರಡು ಗಂಟೆ ಬಳಿಕ ತೊಳೆಯುವುದರಿಂದ ಕೂದಲು ಕಾಂತಿಯುತವಾಗಿ ಉದ್ದವಾಗಿ ಬೆಳೆಯುತ್ತದೆ.
ನೆಲ್ಲಿಕಾಯಿ ಪುಡಿಗೆ ಶೀಕಾಕಾಯಿ ಪುಡಿ, ಕಹಿಬೇವಿನ ಎಲೆಯ ಪುಡಿ, ದಾಲ್ಚಿನಿ ಪುಡಿ ಸೇರಿಸಿ, ನೀರು ಬೆರೆಸಿ ಸಣ್ಣ ಉರಿಯಲ್ಲಿಟ್ಟು ಕುದಿಸಿ. ಬಳಿಕ ಸೋಸಿ. ಈ ನೀರಿಗೆ ಶ್ರೀಗಂಧದ ಎಣ್ಣೆ ಬೆರೆಸಿ. ಕೂದಲಿಗೆ ಹಚ್ಚಿ. ಎರಡು ಗಂಟೆ ಬಳಿಕ ತಲೆ ತೊಳೆಯಿರಿ. ಯಾವುದೇ ಶ್ಯಾಂಪೂ ಬಳಸದಿರಿ.
ನೆಲ್ಲಿಕಾಯಿ ಪುಡಿಗೆ ಮದರಂಗಿ ಎಲೆಯ ಪೇಸ್ಟ್ ತಯಾರಿಸಿ ಬೆರೆಸಿ ಬ್ರಶ್ ಮೂಲಕ ಹಚ್ಚಿಕೊಂಡರೆ ಕೂದಲಿಗೆ ಹೊಳಪು ಬರುವುದು ಮಾತ್ರವಲ್ಲ, ಸಾಕಷ್ಟು ಪ್ರಮಾಣದ ಪೋಷಕಾಂಶ ಲಭ್ಯವಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.