ಎಳನೀರಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆಯೋ ಅದಕ್ಕೂ ಹೆಚ್ಚಿನ ಪ್ರಯೋಜನವನ್ನು ತಲೆಗೆ ಹಚ್ಚಿಕೊಳ್ಳುವುದರಿಂದಲೂ ಪಡೆಯಬಹುದು. ಹೇಗೆನ್ನುತ್ತೀರಾ?
ನಿತ್ಯ ಅಥವಾ ವಾರಕ್ಕೆ ಮೂರು ದಿನ ಎಳನೀರು ಕುಡಿಯುವುದರಿಂದ ನಿಮ್ಮ ತ್ವಚೆ ಸದಾ ಹೊಳೆಯುತ್ತಿರುತ್ತದೆ ಮಾತ್ರವಲ್ಲ ದೇಹದಿಂದ ಅನಗತ್ಯ ಕಲ್ಮಶಗಳು ದೂರವಾಗುತ್ತವೆ. ಮೊಡವೆಗಳು ಬಾರದಂತೆ ನೋಡಿಕೊಂಡು ನಿಮ್ಮ ತ್ವಚೆ ಒಣಗಿ ಪೇಲವವಾಗದಂತೆ ನೋಡಿಕೊಳ್ಳುತ್ತದೆ.
ತೆಂಗಿನೆಣ್ಣೆಯಂತೆ ಎಳನೀರನ್ನೂ ಕೂದಲಿನ ಪೋಷಣೆಗಾಗಿ ಬಳಸಬಹುದು. ಇದರ ನೀರಿನಿಂದ ಕೂದಲ ಬುಡಕ್ಕೆ ಮಸಾಜ್ ಮಾಡುವುದರಿಂದ ಕೂದಲಿನ ಬುಡ ಗಟ್ಟಿಯಾಗುತ್ತದೆ ಮತ್ತು ಕೂದಲು ಉದುರುವುದು ನಿಲ್ಲುತ್ತದೆ.
ಇದೊಂದು ನೈಸರ್ಗಿಕ ಕಂಡೀಶನರ್ ಆಗಿದ್ದು ಕೂದಲನ್ನು ಬುಡದಿಂದ ತುದಿಯ ತನಕ ಮಾಯಿಸ್ಚರೈಸ್ ಆಗಿರುವಂತೆ ನೋಡಿಕೊಳ್ಳುತ್ತದೆ. ಗಂಟು ಅಥವಾ ಸಿಕ್ಕುಗಳಾಗುವುದನ್ನು ತಡೆಯುತ್ತದೆ.