ವಿಶ್ವಾದ್ಯಂತ ನೂರಕ್ಕೂ ಅಧಿಕ ಕಂಪನಿಗಳ ಮೇಲೆ ನಡೆದ ಸಾಮೂಹಿಕ ರ್ಯಾನ್ಸಮ್ವೇರ್ ಅಟ್ಯಾಕ್ ಹಿಂದೆ ಇರುವ ಹ್ಯಾಕರ್ಗಳು ಕಂಪನಿಯ ಡೇಟಾಗಳನ್ನ ವಾಪಸ್ ಬಿಟ್ಟುಕೊಡಲು ಬರೋಬ್ಬರಿ 70 ಮಿಲಿಯನ್ ಡಾಲರ್ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ಬೃಹತ್ ಬೇಡಿಕೆಯನ್ನ ರೆವಿಲ್ ಸೈಬರ್ಕ್ರೈಂ ತಂಡ ತನ್ನ ಬ್ಲಾಗ್ನಲ್ಲಿ ಪೋಸ್ಟ್ ಮಾಡಿದೆ. ಈ ಮಾಹಿತಿಯನ್ನ ದೃಢೀಕರಿಸಿದ ಅಲನ್ ಲಿಸ್ಕಾ ಸೈಬರ್ ಸೆಕ್ಯೂರಿಟಿ ಫರ್ಮ್, ಈ ಸಂದೇಶವು ಅಧಿಕೃತವೆಂದು ಎನಿಸುತ್ತಿದೆ. ಏಕೆಂದರೆ ಈ ಸೈಬರ್ ಕ್ರೈಂ ತಂಡವು ಕಳೆದ ವರ್ಷದಿಂದ ಈ ಬ್ಲಾಗ್ನ್ನು ಬಳಕೆ ಮಾಡ್ತಿದೆ ಎಂದು ಹೇಳಿದೆ.