alex Certify ಏಮ್ಸ್​ ಬೆನ್ನಲ್ಲೇ ಐಸಿಎಂಆರ್​ ವೆಬ್​ಸೈಟ್​ಗೂ ನುಗ್ಗಿದ ಹ್ಯಾಕರ್ಸ್​: ಒಂದೇ ದಿನ 6 ಸಾವಿರ ಬಾರಿ ದಾಳಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಮ್ಸ್​ ಬೆನ್ನಲ್ಲೇ ಐಸಿಎಂಆರ್​ ವೆಬ್​ಸೈಟ್​ಗೂ ನುಗ್ಗಿದ ಹ್ಯಾಕರ್ಸ್​: ಒಂದೇ ದಿನ 6 ಸಾವಿರ ಬಾರಿ ದಾಳಿ….!

ನವದೆಹಲಿ: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಭಾರತೀಯ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ಮೇಲೆ ಹ್ಯಾಕರ್​ಗಳು ಅತಿಯಾಗಿ ಕಣ್ಣಿಟ್ಟಿರುವ ಅಂಶಗಳು ಬೆಳಕಿಗೆ ಬಂದಿವೆ.

ಇತ್ತೀಚೆಗೆ ಏಮ್ಸ್​ ವೆಬ್​ಸೈಟ್​ ಹ್ಯಾಕ್​ ಆಗಿದ್ದ ಬೆನ್ನಲ್ಲೆ ಇದೀಗ ಹ್ಯಾಕರ್ಸ್​ ದೇಶದ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್)​ ವೆಬ್​ಸೈಟ್​ ಅನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ.

ಐಸಿಎಂಆರ್​ನ ವೆಬ್​ಸೈಟ್​ ಮೇಲೆ ಹ್ಯಾಕರ್​ಗಳು ಒಂದೇ ದಿನದಲ್ಲಿ ಸುಮಾರು ಆರು ಸಾವಿರ ಬಾರಿ ದಾಳಿ ಮಾಡಿರುವುದು ತಿಳಿದುಬಂದಿದೆ. ಆದರೆ ಇವರ ದಾಳಿ ಪ್ರಯತ್ನವನ್ನು ಸಂಸ್ಥೆಯ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿದೆ. ಈ ಕುರಿತು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನವೆಂಬರ್ 30 ರಂದು 24 ಗಂಟೆಗಳ ಅವಧಿಯಲ್ಲಿ ಹಾಂಗ್ ಕಾಂಗ್‌ನ ಹ್ಯಾಕರ್‌ಗಳು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವೆಬ್‌ಸೈಟ್‌ನ ಮೇಲೆ ಸುಮಾರು 6000 ಬಾರಿ ದಾಳಿ ಮಾಡಲು ಪ್ರಯತ್ನಿಸಿದ್ದಾರೆ.

ದೆಹಲಿಯಲ್ಲಿ ಏಮ್ಸ್​ ಆನ್​ಲೈನ್​ ಸೇವೆಗಳ ತಾತ್ಕಾಲಿಕ ತಡೆಗೆ ಕಾರಣವಾದ ರ್ಯಾನ್​ಸಮ್​ವೇರ್​ ದಾಳಿಯ ಬೆನ್ನಲ್ಲೇ ಈ ದಾಳಿಗಳು ನಡೆದಿವೆ ಎಂದು ಅವರು ಮಾಹಿತಿ ತಿಳಿಸಿದ್ದಾರೆ.

ಆದರೆ ವೆಬ್‌ಸೈಟ್‌ನ ವಿಷಯಗಳು ಸುರಕ್ಷಿತವಾಗಿವೆ. ನಮ್ಮ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹ್ಯಾಕರ್ ಗಳ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...