ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್. ಮಧು ಬಂಗಾರಪ್ಪ ಅವರ ಫೇಸ್ಬುಕ್ ಖಾತೆ ಹ್ಯಾಕ್ ಮಾಡಲಾಗಿದೆ.
ಸೈಬರ್ ಹ್ಯಾಕರ್ ಸಚಿವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಹಿಡಿತಕ್ಕೆ ತೆಗೆದುಕೊಂಡಿದ್ದು, ಈ ಕುರಿತಾಗಿ ಸಚಿವರ ಆಪ್ತ ಸಹಾಯಕ ಚಿನ್ಮಯಿ ದೇವಧರ್ ಅವರು ಕೇಂದ್ರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
2012ರಲ್ಲಿ ಮಧು ಬಂಗಾರಪ್ಪ ಫೇಸ್ಬುಕ್ ಖಾತೆ ತೆರೆದಿದ್ದು, ಅದನ್ನು ಚಿನ್ಮಯಿ, ಅನಿಲ್ ಬಿ. ನಾಯಕ್, ಸಂತೋಷ್ ನಿರ್ವಹಿಸುತ್ತಿದ್ದರು. 2023ರ ನವೆಂಬರ್ 8 ರಂದು ಅಪರಿಚಿತ ವ್ಯಕ್ತಿ ಸಚಿವರ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ಖಾತೆ ನಿರ್ವಹಿಸುತ್ತಿದ್ದ ಮೂವರನ್ನು ಡಿಲೀಟ್ ಮಾಡಿದ್ದಾನೆ. ನಂತರ ಫೇಸ್ಬುಕ್ ಖಾತೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾನೆ. ಕಿಡಿಗೇಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಲಾಗಿದೆ.