
ಹಾಸನ: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆರ್ಟ್ ನಲ್ಲಿ ಹಾಸನ ಜಿಲ್ಲೆಗೆ ಯಾವುದೇ ಅನುದಾನ ಘೋಷಣೆ ಮಾಡಿಲ್ಲ, ಬಜೆಟ್ ನಲ್ಲಿ ಹಸನ ಜಿಲ್ಲೆಯೇ ಇಲ್ಲ ಎಂದು ಶಾಸಕ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.
ಹಾಸನದಲ್ಲಿ ಮಾತನಾಡಿದ ಹೆಚ್.ಡಿ.ರೇವಣ್ಣ ಹಾಸನ ಜಿಲ್ಲೆಗೆ ಜೂಜು, ಎಣ್ಣೆ, ಮಟ್ಕಾ. ಗಾಂಜಾ ಗ್ಯಾರಾಂಟಿಗಳನ್ನು ನೀಡಿದ್ದಾರೆ. ಜಿಲ್ಲೆಯ ಜನ ಸರ್ಲಾರಕ್ಕೆ ಧನ್ಯವಾದ ಹೇಳಬೇಕು. ತೋಟಗಾರಿಕಾ ಕಾಲೇಜು ಮಂಜೂರು ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಅದೂ ಮಾಡಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 100 ಕೋಟಿ ರೂಪಾಇ ಕೊಡಬೇಕಿತ್ತು. ಆದರೆ ಬಜೆಟ್ ನಲ್ಲಿ ಜಿಲ್ಲೆಗೆ ಯಾವುದೇ ಯೋಜನೆ ಘೋಷಿಸಿಲ್ಲ ಎಂದು ಹೇಳಿದರು.
ಅಲ್ಪಸಂಖ್ಯಾತರಿಗೆ ಸರ್ಕಾರ ಒಂದು ಸಾವಿರ ವಸತಿ ನೀಡಬಹುದಿತ್ತು. ಕೆಲವರು ಟೀಕೆ ಮಾಡ್ತಾರೆ ಆದರೆ ನಾನು ಮಾಡಲ್ಲ. ಮುಂದಿನ ಚುನಾವಣೆ ವೇಳೆಗೆ ಹಾಸನ ಮಹಾನಗರ ಪಾಲಿಕೆಯಾಗುತ್ತೆ. ಆದರೆ ಮಹಾನಗರ ಪಾಲಿಕೆ ಅಭಿವೃದ್ದಿಗೆ ಹಣ ಮೀಸಲಿಟ್ಟಿಲ್ಲ. ಜಿಲ್ಲೆಗೆ ಕೇವಲ ಎಣ್ಣೆ ಭಾಗ್ಯ ನೀಡಲಾಗಿದೆ. ಕರ್ತವ್ಯದಲ್ಲಿದ್ದಾಗ ಪೊಲೀಸರು 7 ಗಂಟೆಗೆ ಎಣ್ಣೆ ಹಾಕುತ್ತಾರೆ. ಈ ಬಗ್ಗೆ ಹಾಸನ ಎಸ್ ಪಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.