
ಬೆಂಗಳೂರು: ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಿಡ್ನ್ಯಾಪ್ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹೆಚ್.ಡಿ.ರೇವಣ್ಣ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಜೈಲಿನಲ್ಲಿಯೇ ಎರಡನೇ ರಾತ್ರಿ ಕಳೆದಿದ್ದಾರೆ. ನಿನ್ನೆ ಹೊಟ್ಟೆನೋವಿನಿಂದ ಬಳಲುತ್ತಿದ್ದ ರೇವಣ್ಣ ಅವರಿಗೆ ಇಂದು ಬೆನ್ನು ನೋವು ಕಾಣಿಸಿಕೊಂಡಿದೆ.
ಬೆನ್ನು ನೋವಿನಿಂದ ಬಳಲುತ್ತಿರುವ ರೇವಣ್ಣ ಅವರಿಗೆ ಡಾ.ಹರ್ಷವರ್ಧನ್ ಚಿಕಿತ್ಸೆ ನೀಡಿದ್ದು, ಪೊಲೀಸರು ರೇವಣ್ಣಗೆ ದಿವಾನ್ ಕಾಟ್ ನೀಡಿದ್ದಾರೆ. ಇನ್ನು ಪಿಎಸ್ ಐ ನೇಮಕಾತಿ ಪ್ರಕರಣದ ಆರೋಪಿ ಅಮೃತ್ ಪಾಲ್ ಇದ್ದ ಸೆಲ್ ನಲ್ಲಿದ್ದ ರೇವಣ್ಣ ಅವರನ್ನು ಸಿಂಗಲ್ ಸೆಲ್ ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.