
ಬೆಂಗಳೂರು: ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರನ್ನು ಎಸ್ ಐಟಿ ಬಂಧಿಸಿದೆ. ಎಸ್ಐಟಿ ಕಚೇರಿಯಲ್ಲಿಯೇ ರೇವಣ್ಣ ರಾತ್ರಿ ಕಳೆದಿದ್ದಾರೆ.
ಎಸ್ಐಟಿ ಅಧಿಕಾರಿಗಳು ಈ ವೇಳೆ ಹೆಚ್.ಡಿ.ರೇವಣ್ಣ ಅವರನ್ನು ವಿಚಾರಣೆ ನಡೆಸಿದ್ದಾರೆ. ಆದರೆ ರೇವಣ್ಣ ಕೇವಲ ಎರಡು ಮಾತು ಬಿಟ್ಟು ಬೇರೇನೂ ಬಾಯ್ಬಿಡುತ್ತಿಲ್ಲ ಎನ್ನಲಾಗಿದೆ.
ಕಿಡ್ನ್ಯಾಪ್ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನಾನು ಯಾರನ್ನೂ ಕಿಡ್ನ್ಯಾಪ್ ಮಾಡಲು ಹೇಳಿಲ್ಲ ಎಂದಷ್ಟೇ ರೇವಣ್ಣ ತಿಳಿಸಿದ್ದಾರೆ. ಇಂದು ಎಸ್ಐಟಿ ಹಲವು ಆಯಾಮಗಳಲ್ಲಿ ರೇವಣ್ಣ ಅವರನ್ನು ವಿಚಾರಣೆ ನಡೆಸಲಿದ್ದು, ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ.