ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ, ಸವಾಲು ಪ್ರತಿ ಸವಾಲುಗಳು ತಾರಕಕ್ಕೇರಿದ್ದು, ಉಪಮುಖ್ಯಂತ್ರಿ ಹಾಕಿದ ಸವಾಲನ್ನು ಕುಮಾರಸ್ವಾಮಿ ಸ್ವೀಕರಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಮನಗರ ಜಿಲ್ಲೆ ವಿಚಾರವಾಗಿ ಬಹಿರಂಗ ಚರ್ಚೆಗೆ ಸಿದ್ಧ. ಡಿ.ಕೆ.ಶಿಯವರು ಎರಡು ಮೂರು ಸವಾಲು ಹಾಕಿದ್ದಾರೆ. ಅವರ ಸವಾಲನ್ನು ಸ್ವೀಕರಿಸುತ್ತೇನೆ. ಮೂರು ದಿನಗಳ ನಂತರ ಚರ್ಚೆಗೆ ಬರಲು ರೆಡಿ ಇದ್ದೇನೆ. ಯಾವಾಗ ಎಂದು ಡೇಟ್ ಫಿಕ್ಸ್ ಮಾಡಿ ಎಂದು ಹೇಳಿದ್ದಾರೆ.
ಹಣ ಪಡೆದಿಲ್ಲ ಎಂಬ ಬಗ್ಗೆ ಪ್ರಮಾಣ ಮಾಡುವಂತೆ ಒಬ್ಬರು ಸವಾಲು ಹಾಕಿದ್ದಾರೆ. ನಾನು ಯಾವ ಹಣವನ್ನೂ ಪಡೆದಿಲ್ಲ. ಧರ್ಮಸ್ಥಳಕ್ಕೆ ಬೇಕಾದರೂ ಬರಲು ಸಿದ್ಧ. ಇಲ್ಲ ಚಾಂಮುಂಡಿ ಸನ್ನಿದಿಯಾದರೂ ಬರಲು ಸಿದ್ದ ಎಂದು ಹೇಳಿದರು.
ನಾನು ಚರ್ಚೆಗೆ ಸಿದ್ಧ. ಪಲಾಯನ ಮಾಡಲ್ಲ. ನನ್ನ ಬಳಿಯೂ ಸರಕುಗಳಿವೆ. ಇಂದಿನ ಆರ್ಥಿಕ ದುಸ್ಥಿತಿಗೆ ಹಿಂದಿನ ಬಿಜೆಪಿ ಕರಣ ಎಂದು ಸಿಎಂ ಹೇಳಿದ್ದಾರೆ. ಇದಕ್ಕೆ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಸ್ವಾಗತ ಮಾಡುತ್ತೇನೆ ಎಂದರು.