ಹಾಸನ: ಕೇಂದ್ರ ಸಚಿವ ಹೆಚ್.ಡಿ ಕುಮರಸ್ವಾಮಿ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಹೂವು ಬಿದ್ದಿದ್ದು, ಉಪಚುನಾವಣೆ ಸಂದರ್ಭದಲ್ಲಿ ಇದು ಶುಭ ಸೂಚಕ ಎಂದು ವಿಶ್ಲೇಷಿಸಲಾಗಿತ್ತಿದೆ.
ಕೇಂದ್ರ ಸಚಿವ ಹೆಚ್.ಡಿ.ಕುಮಮಾರಸ್ವಾಮಿ ಇಂದು ಪತ್ನಿ ಅನಿತಾ ಕುಮಾರಸ್ವಾಮಿ, ಸೊಸೆ ಹಾಗೂ ಮೊಮ್ಮಗನ ಜೊತೆ ಹಾಸನದ ಅದಿದೇವತೆ ಹಾಸನಾಂಬ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಿದ್ದೇಶ್ವರ ಸ್ವಾಮೀಜಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ದೇವರ ಮೇಲಿದ್ದ ಹೂವು ಬಿದ್ದಿದೆ. ಹೂವು ಬೀಳುವುದನ್ನು ಗಮನಿಸಿದ ಪತ್ನಿ ಅನೀತಾ, ಕುಮಾರಸ್ವಾಮಿಯವರಿಗೆ ತಿಳಿಸಿದ್ದಾರೆ.
ಪ್ರಾರ್ಥನೆ ಮಾಡುವಾಗ ಹೂವು ಬಿದ್ದಿರುವುದು ಶುಭ ಸೂಚನೆಯಾಗಿದೆ. ಹಾಗಾಗಿ ಸಿದ್ದೇಶ್ವರ ಸ್ವಾಮಿ ಹೆಚ್.ಡಿ.ಕುಮರಸ್ವಾಮಿಯವರಿಗೆ ಉಪಚುನಾವಣೆ ಹೊತ್ತಲ್ಲಿ ಹಾಗೂ ರಾಜಕೀಯವಾಗಿ ಶುಭ ಸೂಚನೆ ನೀಡಿದ್ದಾರೆ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ.