ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಅಧಿಕಾರಿಗಳನ್ನು ಗುಲಾಮರ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಕಾನೂನು ಬಾಹಿರವಾಗಿರುವವರನ್ನು ರಕ್ಷಿಸುತ್ತಿದ್ದಾರೆ. ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಜ್ಞಾನವಾಪಿ ಅಂತಾ ಹಿಂದೂಗಳು ಧರಣಿ ಮಾಡ್ತಿದ್ದಾರೆ. ಮಸೀದಿ ಅಂತ ಮುಸ್ಲಿಂರು ಧರಣಿ ಮಾಡ್ತಿದ್ದಾರೆ. ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಮನಗರದಲ್ಲಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ. 2-3 ಸಾವಿರ ವಕೀಲರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಸೌಜನ್ಯಕ್ಕೂ ಅವರ ಬೇಡಿಕೆಯನ್ನು ಕೇಳಿಲ್ಲ ಎಂದು ಗುಡುಗಿದರು.
ಇಲ್ಲಿ ಸೆಲ್ಯೂಟ್ ಹೊಡೆಯುವ ಅಧಿಕಾರಿಗಳು ಇದ್ದಾರೆ. ವಕೀಲರು ಬರಲೇಬೇಕು ಅಂತಾ ನಿನ್ನೆ ನನಗೆ ಹೇಳಿದ್ರು. ಮಹಿಳೆಯರಿಗೂ ಹಿಂಸೆ ಆಗಿದೆ. ಪೊಲೀಸ್ ಇಲಾಖೆಯ ವೈಫಲ್ಯದ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವರ್ಗಕ್ಕೆ ರಕ್ಷಣೆ ಕೊಡಲು ಸರ್ಕಾರ ಇದೆಯಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.