ಬೆಂಗಳೂರು: ನನ್ನ ರಾಜೀನಾಮೆ ಕೊಡಿಸಬೇಕು ಎಂದು ಪಾಪ ಅವನು ಬಯಸುತ್ತಿದ್ದಾನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಸಿಎಂ, ಡಿ.ಕೆ.ಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ರಾಜೀನಾಮೆ ಕೊಡಬೇಕು ಎಂಬುದು ಪಾಪ ಅವನ ಆಸೆಯಿರಬೇಕು. ಆಸೆ ಪಡುವವರನ್ನು ತಪ್ಪು ಅಂತಾ ಹೇಳೋಕೆ ಆಗುತ್ತಾ? ಕಿಂಗ್ ಮೇಕರ್ ಆಗ್ತೀನಿ ಎಂದ್ರು. ಆದ್ರೆ ಆಗಲಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾದ ಮೇಲೆ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಬಂದಿದೆ. ಆದ್ರೆ ಆತನ ಅಧ್ಯಕ್ಷತೆಯಲ್ಲಿ ಕೇವಲ 19 ಸೀಟು ಬಂದಿದೆ. ಪಾಪ ಈಗ ಕೈ ಕೈ ಹೊಸಕಿಕೊಳ್ಳುವಂತಾಗಿದೆ ಎಂದು ಅಭಿನಯಿಸುವ ಮೂಲಕ ಹೆಚ್.ಡಿ.ಕೆ.ವಿರುದ್ಧ ವ್ಯಂಗ್ಯವಾಡಿದ್ದಾರೆ.
ಕಿಂಗ್ ಮೇಕರ್ ಆಗಬೇಕು ಎಂಬುದು ಅವನ ಆಸೆಯಾಗಿತ್ತು ಅನ್ಸುತ್ತೆ ಅದು ಈಡೇರಲಿಲ್ಲ. ಹಾಗಾಗಿ ಅವನಿಗೆ ಈಗ ಅಸೂಯೆ. ಅಸೂಯೆ, ಜಲಸ್ ಗೆ ಮದ್ದು ಇದೆಯೇ? ಅಸೂಯೆಪಡುವವರಿಗೆ ನಾನೇನು ಮಾಡಲು ಆಗುತ್ತೆ ಎಂದು ಟಾಂಗ್ ನೀಡಿದ್ದಾರೆ.
ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಏನು ಬೇಕಾದ್ರೂ ಮಾತನಾಡ್ತಾರೆ. ನಾನು ರಾಜೀನಾಮೆ ಕೊಡಲಿ ಎಂದು ಕಾಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.