ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಾಟ 5 ನೇ ದಿನಕ್ಕೆ ಕಾಲಿಟ್ಟಿದೆ. ರೈತರ ಹಿತಕ್ಕಾಗಿ ಕಾಯ್ದೆ ತಂದಿರುವುದಾಗಿ ಹೇಳಿರುವ ಕೇಂದ್ರ ಕೂಡಲೇ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಅವರ ಅನುಮಾನ ನಿವಾರಿಸುವ ಪ್ರಯತ್ನ ಮಾಡಬೇಕೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸರ್ಕಾರ ಅನುಮಾನ ನಿವಾರಿಸುವ ಪ್ರಯತ್ನ ಕೈಗೊಳ್ಳದಿದ್ದರೆ, ರೈತರು ಮತ್ತು ಜನರ ಅನುಮಾನಗಳು ಬೆಳೆಯುತ್ತ ಹೋಗುತ್ತವೆ. ರೈತರ ಸಮಸ್ಯೆ ಆಲಿಸಬೇಕಿದ್ದರೆ ಬುರಾಡಿ ಉದ್ಯಾನಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ರೈತರು ಇದನ್ನು ಒಪ್ಪಿಕೊಂಡಿಲ್ಲ. ತಮಗೆ ಒಡ್ಡಿರುವ ಷರತ್ತು ಇದೆಂದು ರೈತರು ಭಾವಿಸಿದ್ದಾರೆ. ಆದ್ದರಿಂ ಈ ಷರತ್ತು ಹಿಂದಕ್ಕೆ ಪಡೆಯುವುದು ಸೂಕ್ತ ಎಂದು ತಿಳಿಸಿದ್ದಾರೆ.
ರೈತರು ಇರುವಲ್ಲಿಯೇ ಅವರು ಇಚ್ಛಿಸಿದಲ್ಲಿಯೇ ಸಮಸ್ಯೆಗಳನ್ನು ಆಲಿಸಿ ಎಂಬುದು ನನ್ನ ಸಲಹೆಯಾಗಿದೆ. 5 ದಿನಗಳಿಂದ ರೈತರು ದೆಹಲಿ ಗಡಿಭಾಗದಲ್ಲಿ ಕುಳಿತುಕೊಂಡಿದ್ದಾರೆ. ಮೈ ನಡುಗುವ ಚಳಿ ಇದ್ದು, ಕೋವಿಡ್ ಕಾಲದಲ್ಲಿ ರೈತರನ್ನು ಅಲ್ಲಿಯೇ ಬಿಡುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ. ಯಾರಿಗಾದರೂ ಅಪಾಯವಾದರೆ ಕೇಂದ್ರ ಸರ್ಕಾರದ ಬಾಧ್ಯತೆಯಾಗುತ್ತದೆ. ಹೀಗಾಗಿ ಕೂಡಲೇ ಮನವಿ ಆಲಿಸುವುದು ಸಮಂಜಸವೆಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.