ರಾಮನಗರ: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವ ಸಾಧ್ಯತೆ ಇದೆ. 2028ರವರೆಗೆ ಕಾಯಬೇಕಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಮನಗರದ ಇಗ್ಗಲ್ಲೂರಿನಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಅವಧಿಗೂ ಮುನ್ನವೇ ಚುನಾವಣೆ ಬಂದರೂ ಬರಬಹುದು. ಮತ್ತೆ ಚುನಾವಣೆ ನಡೆದರೆ ನಾವು ನಾಲ್ಕು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ನಾವು ಸರ್ಕಾರವನ್ನು ತೆಗೆಯಲ್ಲ. ಆದರೆ ಇವರ ಪಾಪದ ಕೊಡ ತುಂಬಿದೆ. ಮಾಡಬಾರದ ಕೆಲಸ ಮಾಡಿದ್ದಾರೆ. ಆತ್ಮಸಾಕ್ಷಿ ಅಂತಾರೆ ಇಂಥ ಭಂಡರನ್ನು ನೋಡಲು ಸಾಧ್ಯವಿಲ್ಲ. 2028ರವರೆಗೆ ಕಾಯಬೇಕಿಲ್ಲ, ಅದಕ್ಕೂ ಮೊದಲೇ ಚುನಾವಣೆ ಬಂದರೂ ಬರಬಹುದು ಎಂದು ತಿಳಿಸಿದ್ದಾರೆ.