
ಕೊಪ್ಪಳ: ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಹೆಚ್ಚಿನ ತೆರಿಗೆ ಹಾಕುತ್ತಿದೆ. ನಾಡಿನ ಜನರು ಸರ್ಕಾರದ ಖಚಾನೆ ತುಂಬಿಸಲು ಸಹಕಾರ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರತಿನಿತ್ಯ ಗ್ಯಾರಂಟಿ ಯೋಜನೆಗಳ ಭಜನೆ ಮಡುವುದರಲ್ಲೇ ಸರ್ಕಾರ ಕಾಲಕಳೆಯುತ್ತಿದೆ. ಅದನ್ನು ಬಿಟ್ಟರೆ ಕೇಂದ್ರ ಸರ್ಕಾರವನ್ನು ದೂಷಿಸುವುದು. ಇನ್ನೇನನ್ನೂ ಈ ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಕೆಕೆಆರ್ ಡಿಬಿಗೆ 5000 ಕೋಟಿ ಕೊಡುತ್ತೇವೆ ಎಂದರು. ಈವರೆಗೆ ನಯಾಪೈಸೆ ಬಿದುಗಡೆ ಮಾಡಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ. ಗ್ಯಾರಂಟಿ ಹೆಸರಲ್ಲಿ ಹೆಚ್ಚಿನ ತೆರಿಗೆ ಹಾಕುತ್ತಿದ್ದಾರೆ. ಈ ಹಣ ಎಲ್ಲಿಗೆ ಹೋಗುತ್ತಿದೆ? ಎಂದು ಪ್ರಶಿಸಿದರು.