
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದಿದ್ದು, ಕೇತಗಾನಹಳ್ಳಿ ತೋಟದ ಮನೆ ಬಳಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಚಲುವರಾಯಸ್ವಾಮಿ, ನಾವು ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಕೇಳಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಹೆಚ್.ಡಿ.ಕೆ ಎಲ್ಲರಿಗೂ ರಾಜೀನಾಮೆ ಕೇಳುತ್ತಿದ್ದರು. ನಾವೇನು ಅವರಿಗೆ ರಾಜೀನಾಮೆ ಕೊಡಿ ಎಂದು ಕೇಳಿಲ್ಲ. ಅವರು ಸಚಿವರಾಗಿ ಕೆಲಸ ಮಾಡಲಿ. ಅವರಂತೆ ನಮಗೆ ಹೊಟೆ ಉರಿ ಇಲ್ಲ ಎಂದರು.
ಹೆಚ್.ಡಿ.ಕೆ ಭೂ ಒತ್ತುವರಿ ಮಾಡಿದ್ದರೆ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವು ಮಾಡುವಂತೆ ಕೋರ್ಟ್ ಆದೇಶ ನೀಡಿದೆ. ಅದರಂತೆ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದರು. ನಾವು ಅವರ ರಾಜೀನಾಮೆ ಕೇಳಿಲ್ಲ ಎಂದು ಹೇಳಿದರು.