ಮಂಡ್ಯ: ನಾನೊಬ್ಬ ಸಾಮಾನ್ಯ ಹಳ್ಳಿಯ ರೈತನ ಮಗ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ನಾನು ಪ್ರಧಾನಿಯಾಗುತ್ತೇನೆ ಅಂದುಕೊಂಡಿರಲಿಲ್ಲ. ಒತ್ತಾಯ ಮಾಡಿ ಪ್ರಧಾನಿ ಸ್ಥಾನದಲ್ಲಿ ಕೂರಿಸಿದರು. ನಾನು ಏನು ಕೆಲಸ ಮಾಡಿದೆ ಎಂದು ಹೇಳುವುದಿಲ್ಲ. ನನ್ನ ಕೆಲಸದ ಬಗ್ಗೆ ಪುಸ್ತಕ ಬಿಡುಗಡೆಯಾಗುತ್ತದೆ. ರಾಜಕೀಯ ಶಕ್ತಿ ತುಂಬಿದ್ದು ಹಾಸನ ಬಿಟ್ಟರೆ ಮಂಡ್ಯ ಜಿಲ್ಲೆ ಎಂದು ಹೇಳಿದ್ದಾರೆ.
ಯಾರೂ ಹೋರಾಟದ ಸಂಕಲ್ಪ ಕಿತ್ತುಕೊಳ್ಳಲು ಆಗುವುದಿಲ್ಲ. ನಾಳೆ ನಾಡಿದ್ದು ಜಿಲ್ಲಾ ಪ್ರವಾಸ ಮಾಡುತ್ತೇನೆ. ಬೆಂಗಳೂರು ಗ್ರಾಮಾಂತರ, ತುಮಕೂರು ಪ್ರವಾಸ ಮಾಡುತ್ತೇನೆ. ಮೈಸೂರು ಭಾಗಕ್ಕೆ ಜೆಡಿಎಸ್ ಸೀಮಿತವಾಗಿದೆ ಎಂದು ಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿಯಾಗಲು ಮುಂಬೈ-ಕರ್ನಾಟಕ, ಕಲ್ಯಾಣ ಕರ್ನಾಟಕದ ಜನರ ಕೊಡುಗೆಯೂ ಇದೆ. 2023 -24ರಲ್ಲಿ ನಾನು ಸುಮ್ಮನೆ ಕೂರುವುದಿಲ್ಲ ಕೊನೆಯ ಹೋರಾಟ ಮಾಡುತ್ತೇನೆ. ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಸೋಲಾಗಿತ್ತು ಎಂದು ಹೇಳಿದ್ದಾರೆ.