ಪಾಟ್ನಾ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಜಿಮ್ ತರಬೇತುದಾರನಿಗೆ ಗುಂಡು ಹಾರಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಜೆಡಿಯು ನಾಯಕ ರಾಜೀವ್ ಕುಮಾರ್ ಸಿಂಗ್ ಮತ್ತು ಅವರ ಪತ್ನಿ ಖುಷ್ಬುವನ್ನು ಪೊಲೀಸರು ಬಂಧಿಸಿದ್ದಾರೆ.
ಜಿಮ್ ತರಬೇತುದಾರ ವಿಕ್ರಮ್ ಸಿಂಗ್ ಎಂಬವರಿಗೆ ಗುಂಡು ಹಾರಿಸಲಾಗಿದೆ. ಶನಿವಾರ ಬೆಳಿಗ್ಗೆ ಪಾಟ್ನಾದಲ್ಲಿ ತಮ್ಮ ಜಿಮ್ ಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಅಪರಿಚಿತರು ಫೈರಿಂಗ್ ಮಾಡಿದ್ದಾರೆ. ತನ್ನ ಮೇಲೆ ಗುಂಡಿನ ದಾಳಿಯಾದರೂ 2.5 ಕಿ.ಮೀ.ವರೆಗೆ ದ್ವಿಚಕ್ರ ವಾಹನ ಚಲಾಯಿಸಿದ ವಿಕ್ರಮ್ ಸಿಂಗ್ ಆಸ್ಪತ್ರೆ ತಲುಪಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ
ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಬಳಿಕ ವಿಕ್ರಮ್ ಸಿಂಗ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೆಡಿಯು ನಾಯಕ ರಾಜೀವ್ ಕುಮಾರ್ ಸಿಂಗ್ ಮತ್ತು ಅವರ ಪತ್ನಿ ಖುಷ್ಬು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ವಿಕ್ರಂ ಸಿಂಗ್ ರನ್ನು ಕೊಲ್ಲಲು ಸುಪಾರಿ ಕಿಲ್ಲರ್ಸ್ ಅನ್ನು ಬಳಸಲಾಗಿದೆ. ಮತ್ತು ಈ ಪಿತೂರಿಯ ಹಿಂದೆ ಸಿಂಗ್ ಮತ್ತು ಆತನ ಪತ್ನಿಯೇ ಮುಖ್ಯ ಸೂತ್ರಧಾರರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪತ್ನಿ ಖುಷ್ಬೂ ಜೊತೆ ಸಂಬಂಧ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ವಿಕ್ರಮ್ ಸಿಂಗ್ ಗೆ ಕಳೆದ ಏಪ್ರಿಲ್ ನಲ್ಲಿ ರಾಜೀವ್ ಕುಮಾರ್ ಕೊಲೆ ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ.