ಬೆಂಗಳೂರು: ಚಿತ್ರರಂಗದ ಬೇಡಿಕೆಗೆ ಮಣಿದ ಸರ್ಕಾರ ಏಪ್ರಿಲ್ 7 ರ ವರೆಗೆ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದೆ.
ಈಗ ಜಿಮ್ ಗಳಲ್ಲಿ ಶೇಕಡ 50 ರಷ್ಟು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದಿಂದ ಕೊರೋನಾ ತಡೆಗೆ ಮಾರ್ಗಸೂಚಿ ಹೊರಡಿಸಿ ಜಿಮ್ ಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿತ್ತು.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸ್ ಬಳಕೆ ಸೇರಿದಂತೆ ಕಟ್ಟುನಿಟ್ಟಿನ ಸೂಚನೆಗಳೊಂದಿಗೆ ಶೇಕಡ 50 ರಷ್ಟು ಅವಕಾಶ ನೀಡಿ ಜಿಮ್ ತೆರೆಯಲು ಸರ್ಕಾರ ಆದೇಶ ಹೊರಡಿಸಿದೆ.
ಜಿಮ್ ಅಸೋಸಿಯೇಷನ್ ವತಿಯಿಂದ ಶೇಕಡ 50 ರಷ್ಟು ಅವಕಾಶಕ್ಕೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕೈಗೊಂಡಿದೆ ಎಂದು ಹೇಳಲಾಗಿದೆ.