ಲಖನೌ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ವಾರಣಾಸಿ ಜಿಲ್ಲಾ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ವಾರಾಣಸಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರ ಎದುರು ಇಂದು ಮಸೀದಿ ಸರ್ವೆ ಕುರಿತ ವಿಡಿಯೋವನ್ನು ಸಲ್ಲಿಸಲಾಗಿದ್ದು, ಹಿಂದೂ ಹಾಗೂ ಮುಸ್ಲಿಂ ಪರ ವಕೀಲರ ಮನವಿಯನ್ನು ಆಲಿಸಿದ ನ್ಯಾಯಾಲಯ ವಿಚಾರಣೆ ನಾಳೆಗೆ ಮುಂದೂಡಿದೆ.
ಜ್ಞಾನವಾಪಿ ಮಸೀದಿಯ ಕಮೀಷನರ್ ಸರ್ವೆ ವರದಿ ಆಕ್ಷೇಪಣೆ ಕುರಿತ ಅರ್ಜಿ ವಿಚಾರಣೆ ನಡೆಸಬೇಕೋ ಅಥವಾ ಹಿಂದೂಗಳ ಪರ ಅರ್ಜಿಯ ವಿಚಾರಣೆ ಮೊದಲು ನಡೆಸಬೇಕೋ ಎಂಬ ಬಗ್ಗೆ ನಿರ್ಧರಿಸಿ ಬಳಿಕ ವಾದ-ಪ್ರತಿವಾದಕ್ಕೆ ನ್ಯಾಯಾಲಯ ಅವಕಾಶ ಕಲ್ಪಿಸಲಿದೆ ಎಂದು ತಿಳಿದುಬಂದಿದೆ.