ಪ್ರೇಮಕ್ಕೆ ಯಾವುದೇ ಜಾತಿ, ಭಾಷೆ ಅಥವಾ ದೇಶಗಳ ಗಡಿ ಇರಬೇಕು ಎಂದೇನಿಲ್ಲ. ಮಧ್ಯ ಪ್ರದೇಶದ ಗ್ವಾಲಿಯರ್‌ನಿಂದ ಕೇಳಿಬಂದ ಈ ಲವ್‌ಸ್ಟೋರಿ ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ.
ಗ್ವಾಲಿಯರ್‌ನ ಅವಿನಾಶ್ ದೋಹ್ರೇ ಹೆಸರಿನ ಈತ ಮೊರೊಕ್ಕೋದ ಫದ್ವಾ ಲೈಲ್ಮಾಲಿ ಹೆಸರಿನ ಯುವತಿಯೊಬ್ಬರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾಗಿದ್ದಾರೆ. ಇಬ್ಬರ ಸ್ನೇಹ ಕೂಡಲೇ ರೊಮ್ಯಾಂಟಿಕ್ ತಿರುವು ಪಡೆದು ತಮ್ಮ ಮುಂದಿನ ಜೀವನವನ್ನು ಜೊತೆಯಾಗಿ ಕಳೆಯಲು ನಿರ್ಧರಿಸಿದ್ದಾರೆ.
ವಿಕ್ಕಿ-ಕತ್ರಿನಾ ಮದುವೆಯಾಗಿ ಒಂದು ತಿಂಗಳು, ಸೆಲ್ಫಿ ಹಂಚಿಕೊಂಡು ಗಂಡನಿಗೆ ಶುಭಾಶಯ ಹೇಳಿದ ಕ್ಯಾಟ್..!
ಫದ್ವಾ ಕುಟುಂಬಸ್ಥರನ್ನು ಭೇಟಿಯಾಗಲು ಮೊರೊಕ್ಕೋಗೆ ಎರಡು ಬಾರಿ ಭೇಟಿ ಕೊಟ್ಟ ಅವಿನಾಶ್, ಆಕೆಯ ಅಪ್ಪ ಅಲಿ ಲೈಲ್ಮಾಲಿಯನ್ನು ಭೇಟಿಯಾಗಿದ್ದಾರೆ. ಅಲಿ ತನ್ನ ಮಗಳನ್ನು ಅವಿನಾಶ್‌ಗೆ ಕೊಟ್ಟು ಮದುವೆ ಮಾಡಿಕೊಡಬೇಕಾದಲ್ಲಿ ಆತ ಬಂದು ಮೊರೊಕ್ಕೂದಲ್ಲಿ ನೆಲೆಸಬೇಕೆಂದು ಷರತ್ತು ವಿಧಿಸಿದ್ದಾರೆ.
ತಾನು ತನ್ನ ಜಾತಿ ಬಿಡುವುದೂ ಇಲ್ಲ ಹಾಗೂ ದೇಶ ತೊರೆಯುವುದೂ ಇಲ್ಲವೆಂದ ಅವಿನಾಶ್, ಫದ್ವಾಗೆ ತನ್ನ ಜಾತಿ ಬಿಡಲು ಹೇಳುವುದೂ ಇಲ್ಲವೆಂದು ಅಲಿಗೆ ಹೇಳಿದ್ದಾರೆ.
ತನ್ನ ಮಗಳು ಹಾಗೂ ಅವಿನಾಶ್ ನಡುವಿನ ಆಳವಾದ ಪ್ರೇಮವನ್ನು ಅರಿತ ಅಲಿ ಇಬ್ಬರ ಮದುವೆಗೆ ಸಮ್ಮತಿ ನೀಡಿದ್ದಾರೆ.
ಅವಿನಾಶ್ ಮತ್ತು ಫದ್ವಾ ಗ್ವಾಲಿಯರ್‌ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಔಪಚಾರಿಕವಾಗಿ ಮದುವೆಯಾಗಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಹಿಂದೂ ಸಂಪ್ರದಾಯದಂತೆ ಗೃಹಸ್ಥಾಶ್ರಮ ಪ್ರವೇಶಿಸಲಿದೆ.