ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ದಿನಕ್ಕೊಂದು ರೂಪಾಂತರ ವಿಜ್ಞಾನಿಗಳ ತಲೆಕೆಡಿಸಿದೆ. ಕೊರೊನಾಗೆ ಈಗಾಗಲೇ ಅನೇಕ ರೀತಿಯ ಚಿಕಿತ್ಸೆ ನಡೆಯುತ್ತಿದೆ. ಈ ಮಧ್ಯೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಕೊರೊನಾಕ್ಕೆ ನಮ್ಮ ಹೊಟ್ಟೆಯಲ್ಲಿಯೇ ಮದ್ದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾ ಒಂದು ಕೊರೊನಾ ವೈರಸ್ ಸಾಯಿಸಲಿದೆಯಂತೆ.
ದಕ್ಷಿಣ ಕೊರಿಯಾದ ಯಾನ್ಸೀ ವಿಶ್ವವಿದ್ಯಾಲಯ ಅಧ್ಯಯನ ನಡೆಸಿದೆ. ಅಧ್ಯಯನದ ಪ್ರಕಾರ, ಮಾನವನ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾವು ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬ್ಯಾಕ್ಟೀರಿಯಾವು ಕೊರೊನಾಗೆ ಕಾರಣವಾಗುವ ವೈರಸ್ ತಡೆಯುವ ಸಾಮರ್ಥ್ಯವನ್ನು ಹೊಂದಿರುವ ಸಂಯುಕ್ತವನ್ನು ಉತ್ಪಾದಿಸುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.
ಹೊಟ್ಟೆಯಲ್ಲಿ ಕಂಡು ಬರುವ ಬ್ಯಾಕ್ಟೀರಿಯಾ, ಕೊರೊನಾ ವೈರಸ್ ವಿರುದ್ಧ ಹೋರಾಡಲಿದೆಯೇ ಎಂಬ ಬಗ್ಗೆ ಅಧ್ಯಯನ ನಡೆದಿದೆ. ಹೊಟ್ಟೆಯಲ್ಲಿರುವ ಬೈಫಿಡೋಬ್ಯಾಕ್ಟೀರಿಯಂ ಬ್ಯಾಕ್ಟೀರಿಯಾ ಕೊರೊನಾ ವೈರಸ್ ಸಾಯಿಸುವ ಕೆಲಸ ಮಾಡಿದೆ. ಆದ್ರೆ ಇದ್ರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕೆಂದು ತಜ್ಞರು ಹೇಳಿದ್ದಾರೆ.
ಕೊರೊನಾ ವೈರಸ್ ಲಕ್ಷಣಗಳು ಭಿನ್ನವಾಗಿದೆ. ಕೆಲವರ ಶ್ವಾಸಕೋಶಕ್ಕೆ ವೈರಸ್ ದಾಳಿ ಮಾಡಿದ್ರೆ ಮತ್ತೆ ಕೆಲವರ ಹೊಟ್ಟೆಗೆ ದಾಳಿ ಮಾಡಿದೆ.