ಬೆಂಗಳೂರು: ನಟ, ನಿರ್ದೇಶಕ ಗುರುಪ್ರಸಾದ್ ಮಾದನಾಯಕನಹಳ್ಳಿಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ನಿಧನಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್, ಗುರುಪ್ರಸಾದ್ ನಮ್ಮ ಮನೆಯಲ್ಲಿ ಬೆಳೆದ ಹುಡುಗ ಆತ ಪ್ರತಿಭಾವಂತನಾಗಿದ್ದ. ಪುಸ್ತಕಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದ. ಯಾವಾಗಲೂ ಆತನ ಬಳಿ 3-4 ಪುಸ್ತಕಗಳು ಇರುತ್ತಿದ್ದವು ನಂತರದಲ್ಲಿ ಆತ ಸಂಪೂರ್ಣ ಬದಲಾದ .ಆತನ ಸಹವಾಸದಿಂದ ಈ ರೀತಿ ಆಗಿರಬಹುದು ಎಂದು ಹೇಳಿದ್ದಾರೆ.
ಗುರುಪ್ರಸಾದ್ ಯಾರ ಮಾತನ್ನು ಕೇಳುತ್ತಿರಲಿಲ್ಲ. ನಾನು ಹೆಚ್ಚಿಗೆ ಮಾತನಾಡಿಸುತ್ತಿರಲಿಲ್ಲ. ಕುಡಿತದ ಚಟಕ್ಕೆ ಬಿದ್ದು ತುಂಬಾ ಹಾಳಾಗಿದ್ದ. ಒಳ್ಳೆಯ ಬರವಣಿಗೆಯ ತಾಕತ್ ಹೊಂದಿರುವ ವ್ಯಕ್ತಿ ಗುರುಪ್ರಸಾದ್. ಅನೇಕ ಸಲ ಸಾಯುತ್ತೇನೆ ಎಂದು ಹೇಳಿದ್ದ. ನಾನು ಬಹಳ ಬುದ್ಧಿವಾದ ಹೇಳಿದ್ದೆ. ಜಗಳ, ಅಹಂ ಇತ್ತು. ನನ್ನ ನೆನಪನ್ನು ಬಿಟ್ಟು ಹೋಗುತ್ತೇನೆ ಎಂದಿದ್ದ ಎಂದು ಜಗ್ಗೇಶ್ ಹೇಳಿದ್ದಾರೆ.