ಐಎಂಟಿ ಮ್ಯಾನೆಸರ್ ಪ್ರದೇಶದಲ್ಲಿರುವ ಲೋಹ ಸಂಸ್ಕರಣಾಗಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಾಲವನ್ನು ತೀರಿಸುವ ಸಲುವಾಗಿ ಚಿನ್ನವನ್ನು ನುಂಗಿದ್ದು ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸುಬ್ರತಾ ಬರ್ಮಾನ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ನಿವಾಸಿಯಾದ ಈತ ಚಿನ್ನದ ಆಭರಣಗಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ನರೇಗಾ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್
ಕಂಪನಿಯ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದ ವೇಳೆಯಲ್ಲಿ ಬರ್ಮಾನ್ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ತನ್ನ ಪಾಳಿಯ ಕೆಲಸ ಮುಗಿಸಿ ಮನೆಗೆ ತೆರಳುವ ಮುನ್ನ ಭದ್ರತಾ ಸಿಬ್ಬಂದಿ ಬರ್ಮಾನ್ಗೆ ಮೆಟಲ್ ಡಿಟೆಕ್ಟ್ ಹಿಡಿದು ಪರಿಶೀಲಿಸಿದ್ದಾರೆ. ಈ ವೇಳೆ ಮೆಟಲ್ ಡಿಟೆಕ್ಟರ್ ಶಬ್ದ ಮಾಡಿದೆ. ಆದರೆ ಬರ್ಮಾನ್ರನ್ನು ಎಷ್ಟು ಪರಿಶೀಲನೆ ಮಾಡಿದರೂ ಸಹ ಯಾವುದೇ ಚಿನ್ನ ಸಿಗಲಿಲ್ಲ. ಇದರಿಂದ ಅನುಮಾನ ಆರಂಭವಾಯ್ತು.
ಕೂಡಲೇ ಕಂಪನಿಯ ಸಿಬ್ಬಂದಿ ಬರ್ಮಾನ್ನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸ್ ರೇ ವರದಿ ತೆಗೆಸಿದ್ರು. ಈ ವೇಳೆ ಹೊಟ್ಟೆಯಲ್ಲಿ ಚಿನ್ನದ ಲೋಹ ಕಂಡು ಬಂದಿದೆ. ಪೊಲೀಸರು ತನಿಖೆಗೆ ಮುಂದಾಗುತ್ತಿದ್ದಂತೆಯೇ ಬರ್ಮಾನ್ ಸಾಲ ತೀರಿಸುವ ಸಲುವಾಗಿ ತಾನು 1.6 ಗ್ರಾಂ ಚಿನ್ನವನ್ನು ನುಂಗಿದ್ದಾಗಿ ಹೇಳಿದ್ದಾನೆ.
ಬಂಡೆಗಳ ಮಧ್ಯೆ ಕುಳಿತ ದೈತ್ಯ ಸಸ್ತನಿ ವಾಲ್ರಸ್ ಫೋಟೋ ವೈರಲ್..!
ನನಗೆ ಹಣದ ಅವಶ್ಯಕತೆ ಇತ್ತು. ಮಾಡಿದ ಸಾಲವನ್ನು ತೀರಿಸಬೇಕಿತ್ತು. ಹೀಗಾಗಿ ತಾನು ಚಿನ್ನವನ್ನು ಕದ್ದಿರೋದಾಗಿ ಆರೋಪಿ ಹೇಳಿದ್ದಾನೆ. ಕಂಪನಿ ಮ್ಯಾನೇಜರ್ ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
“ಆರೋಪಿಯು ತನಗೆ ಹಣದ ಅವಶ್ಯಕತೆಯಿದೆ ಎಂದು ಹೇಳಿದನು ಮತ್ತು ಸಾಲ ತೀರಿಸಲು ಚಿನ್ನವನ್ನು ಕದ್ದಿದ್ದಾನೆ. ಕಂಪನಿಯ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ ನಂತರ, ಆರೋಪಿಯನ್ನು ಬಂಧಿಸಲಾಯಿತು, ”ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.