ಅಪರಿಚಿತರನ್ನು ನಂಬಿ ಆನ್ ಲೈನ್ ನಲ್ಲಿ ಹಣ ಪಾವತಿಸಿ ಲಕ್ಷಗಟ್ಟಲೆ ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಅಂತಹ ಮತ್ತೊಂದು ಘಟನೆಯಲ್ಲಿ ಗುರುಗ್ರಾಮ್ ನಿವಾಸಿಯೊಬ್ಬರಿಗೆ ಯೂಟ್ಯೂಬ್ ವೀಡಿಯೊಗಳನ್ನು ಲೈಕ್ ಮಾಡಿದ್ರೆ , ಪ್ರತಿ ಲೈಕ್ ಗೆ 50 ರೂಪಾಯಿ ಪಾವತಿಸೋದಾಗಿ ನಂಬಿಸಿ 8.5 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಗುರುಗ್ರಾಮ್ ನಿವಾಸಿ ಸಿಮ್ರಂಜೀತ್ ಸಿಂಗ್ ನಂದಾ ಅವರು ಕೆಲವು ಯೂಟ್ಯೂಬ್ ವೀಡಿಯೊಗಳನ್ನು ಲೈಕ್ ಮಾಡುವ ಮೂಲಕ ಹಣ ಗಳಿಸಲು ವಂಚಕರು ಆಮಿಷ ಒಡ್ಡಿದ್ದರಿಂದ 8.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವರದಿಯ ಪ್ರಕಾರ, ವಂಚಕರು ಸಿಮ್ರಂಜೀತ್ ಸಿಂಗ್ ನಂದಾ ಅವರನ್ನು ವಾಟ್ಸಾಪ್ ಸಂದೇಶದ ಮೂಲಕ ಸಂಪರ್ಕಿಸಿದ್ದರು.
ಕೆಲವು ಯೂಟ್ಯೂಬ್ ವೀಡಿಯೊಗಳಲ್ಲಿ ಪ್ರತಿ ಲೈಕ್ಗೆ ರೂ. 50 ಪಡೆಯುವುದು ಆರಂಭಿಕ ಪ್ರಸ್ತಾಪವಾಗಿತ್ತು. ಆದರೆ ವಂಚಕರು ನಂತರ ವ್ಯಾಪಾರಿ ಕಾರ್ಯಗಳಿಗಾಗಿ’ಹಣ ವರ್ಗಾವಣೆ ಮಾಡುವಂತೆ ವಿನಂತಿಸಿದ್ದಾರೆ. ವಂಚಕರ ಬಲೆಗೆ ಬಿದ್ದ ನಂದಾ ಅವರು ಮಾರ್ಚ್ 27, 28, 29 ಮತ್ತು 30 ರ ವಿವಿಧ ವಹಿವಾಟುಗಳಲ್ಲಿ ಸುಮಾರು 8.5 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ.