ಮೊಬೈಲ್ ಎಟಿಎಂ ಒಂದು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇನ ಇಫ್ಕೋ ಚೌಕ್ ಫ್ಲೈಓವರ್‌ನಲ್ಲಿ ಭಾನುವಾರ ಮಧ್ಯಾಹ್ನ ಖಾಸಗಿ ಬ್ಯಾಂಕ್‌ಗೆ ಸೇರಿದ ಮೊಬೈಲ್ ಎಟಿಎಂ ಬೆಂಕಿಗೆ ಆಹುತಿಯಾಗಿದೆ.
ಘಟನೆ ನಡೆದಾಗ ಕ್ಯಾಶ್ ವ್ಯಾನ್‌ನಲ್ಲಿ ಭದ್ರತಾ ಸಿಬ್ಬಂದಿ ಮತ್ತು ಚಾಲಕ ಇದ್ದರು. ಆದರೆ ಇಬ್ಬರೂ ವಾಹನದಿಂದ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ. ಎಟಿಎಂ ವ್ಯಾನ್‌ನಲ್ಲಿ 13 ಲಕ್ಷ ರೂ. ಇತ್ತೆಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ವ್ಯಾನ್‌ನ ಇಂಜಿನ್‌ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿತು ಮತ್ತು ಅದು ವ್ಯಾನ್‌ನಾದ್ಯಂತ ವೇಗವಾಗಿ ವ್ಯಾಪಿಸಿ ವಾಹನ ಸುಟ್ಟುಹೋಯಿತು.
ವ್ಯಾನಿನೊಳಗೆ ಅಳವಡಿಸಲಾಗಿದ್ದ ಎಟಿಎಂ ಯಂತ್ರದ ಕೆಲ ಭಾಗಗಳಿಗೂ ಹಾನಿಯಾಗಿದೆ. ಎಟಿಎಂನಲ್ಲಿ ನಗದು ಇದೆಯೇ ಅಥವಾ ಇಲ್ಲವೇ ಎಂಬುದು ಬ್ಯಾಂಕ್ ಅಧಿಕಾರಿ ಅದನ್ನು ತೆರೆದ ನಂತರ ತಿಳಿಯುತ್ತದೆ. ಒಂದು ವೇಳೆ ನೋಟು ಸುಟ್ಟು ಹೋಗಿದ್ದರೆ ವಹಿವಾಟಿನ ಮೊತ್ತವನ್ನು ಪರಿಶೀಲಿಸಿದ ನಂತರವೂ ತಿಳಿಯುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.