2 ವರ್ಷದ ಕಂದಮ್ಮನ ಮೇಲೆ ತಂದೆಯೇ ಅತ್ಯಾಚಾರಗೈದ ಅಮಾನುಷ ಘಟನೆ ಹರಿಯಾಣದ ಗುರುಗ್ರಾಮ ಜಿಲ್ಲೆಯ ಪಟೌಡಿ ಎಂಬಲ್ಲಿ ನಡೆದಿದೆ. ಆಗಸ್ಟ್ 28ರಂದು ಈ ಘಟನೆ ನಡೆದಿದ್ದು ಸೆಪ್ಟೆಂಬರ್ 2ರಂದು ಪೊಲೀಸರು ಆರೋಪಿ ವಿರುದ್ಧ ದೂರು ದಾಖಲಿಸಿದ ಬಳಿಕ ಬೆಳಕಿಗೆ ಬಂದಿದೆ.
ಅಪ್ರಾಪ್ತ ಬಾಲಕಿಯ ತಾಯಿ ಬಿಹಾರ ಮೂಲದವರಾಗಿದ್ದು 2 ವರ್ಷಗಳ ಹಿಂದೆ ಮಗುವಿನ ಜೊತೆ ಗುರುಗ್ರಾಮದಲ್ಲಿ ವಾಸವಿದ್ದರು. ದಂಪತಿ ನಡುವೆ ಪದೇ ಪದೇ ಜಗಳ ಏರ್ಪಡುತ್ತಿತ್ತು. ಹೀಗಾಗಿ ಕಳೆದ ತಿಂಗಳು ಮಹಿಳೆ, ಪತಿಯಿಂದ ದೂರಾಗಿ ಬೇರೊಬ್ಬನ ಜೊತೆ ವಿವಾಹವಾಗಿದ್ದರು.
ಆಗಸ್ಟ್ 28ರಂದು ಮಹಿಳೆ ಹಾಗೂ ಮಗಳು ಮಲಗಿದ್ದ ವೇಳೆ ಬಂದ ಮಾಜಿ ಪತಿ ಬಾಡಿಗೆ ಮನೆಯನ್ನು ಪ್ರವೇಶಿಸಿದ್ದಾನೆ. ಮಾಜಿ ಪತ್ನಿಯನ್ನು ಬಲವಂತವಾಗಿ ಕೊಠಡಿಯಿಂದ ಹೊರಗೆ ಹಾಕಿದ ಆರೋಪಿಯು ಬಾಗಿಲು ಹಾಕಿಕೊಂಡಿದ್ದ. ಮಹಿಳೆ ಎಷ್ಟು ಬಾರಿ ಬಾಗಿಲು ಬಡಿದರೂ ತೆರೆದಿರಲಿಲ್ಲ.
ಸಿದ್ಧಾರ್ಥ ಶುಕ್ಲಾ ಕೊನೆಯುಸಿರೆಳೆದ ರಾತ್ರಿ ಆಗಿದ್ದೇನು…? ಇಲ್ಲಿದೆ ವಿವರ
ಕೆಲ ಸಮಯದ ಬಾಗಿಲು ತೆರೆದ ಆರೋಪಿ ಇಲ್ಲಿ ನಡೆದ ಘಟನೆ ಯಾರಿಗಾದರೂ ಹೇಳಿದರೆ ಕೊಲೆ ಮಾಡೋದಾಗಿ ಬೆದರಿಕೆಯೊಡ್ಡಿದ್ದ. ನನ್ನ ಮಗಳು ನೆಲದ ಮೇಲೆ ಮಲಗಿ ಅಳುತ್ತಿದ್ದಳು. ಆಕೆಯ ಖಾಸಗಿ ಅಂಗದಲ್ಲಿ ರಕ್ತ ಹರಿಯುತ್ತಿತ್ತು ಎಂದು ಮಹಿಳೆ ಹೇಳಿದ್ದಾರೆ.
ಮಂಗಳವಾರ ಈ ಸಂಬಂಧ ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿದ್ದಾರೆ.