ನೈಟ್ ಕ್ಲಬ್ ಬಳಿ ಅವಳಿ ಬಾಂಬ್ ಸ್ಫೊಟಗೊಂಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಹ್ಯೂಮನ್ ನೈಟ್ ಕ್ಲಬ್ ನ ಹೊರಗೆ ಬೆಳಿಗ್ಗೆ 5:15ರ ಸುಮಾರಿಗೆ ಅವಳಿ ಬಾಂಬ್ ಸ್ಫೋಟಗೊಂಡಿದೆ. ಈ ದೃಶ್ಯ ಪಕ್ಕದ ಕ್ಲಬ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ಮೀರತ್ ನಿವಾಸಿ ಸಚಿನ್ ಎಂದು ಗುರುತಿಸಲಾಗಿದೆ.
ಆತನ ಬಳಿ ಇದ್ದ ಎರಡು ಸಜೀವ ಕಚ್ಚಾ ಬಾಂಬ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಕುಡಿದ ಮತ್ತಿನಲ್ಲಿ ಎರಡು ಬಾಂಬ್ ಸ್ಫೋಟಿಸಿರುವ ಆರೋಪಿ, ಇನ್ನೆರೆಡು ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಅಷ್ಟರಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.