ಚಂಡೀಗಢ: ಗುರುಗ್ರಾಮ್ ದಲ್ಲಿ ನಡೆದ ಅವಳಿ ಸ್ಫೋಟ ಪ್ರಕರಣದ ಹೊಣೆಯನ್ನು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಂಗ್ ಹೊತ್ತುಕೊಂಡಿದೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಸಹಚರರಾದ ರೋಹಿತ್ ಗೋಡಾರಾ ಹಾಗೂ ಗೋಲ್ಡಿ ಬ್ರಾರ್ ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಇದು ಸಣ್ಣ ಮಟ್ಟದ ಸ್ಫೋಟ. ಇನ್ನೂ ದೊಡ್ಡ ಮಟ್ಟದಲ್ಲಿ ಸ್ಫೋಟಗೊಳಿಸುವ ಬಗ್ಗೆ ಪ್ಲಾನ್ ಇದೆ. ಬಾರ್ ಮಾಲೀಕ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ್ದಾನೆ ತೆರಿಗೆ ವಂಚನೆ ಮೂಲಕ ದೇಶದ ಆರ್ಥಿಕ ಸ್ಥಿತಿಗೆ ಹಾನಿ ಮಾಡಿದ್ದಾನೆ ಎಂದು ಆರೋಪಿಸಿದೆ.
ಪ್ರಕರಣ ಸಂಬಂಧ ಈಗಾಗಲೇ ಗುರುಗ್ರಾಮ್ ಪೊಲೀಸರು ಸಚಿನ್ ಎಂಬ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಡಿ.10ರಂದು ಗುರುಗ್ರಾಮದ ಬಾರ್ ಹೊರಗೆ ಎರಡು ಬಾಂಬ್ ಸ್ಫೋಟಗೊಂಡಿತ್ತು. ತಕ್ಷಣ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದರು.