alex Certify ಮುಸ್ಲಿಂರ ನಮಾಜ್​ಗೆ ಸ್ಥಳಾವಕಾಶ ನೀಡಲು ಮುಂದಾದ ಸಿಖ್​ ಸಂಘಟನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಸ್ಲಿಂರ ನಮಾಜ್​ಗೆ ಸ್ಥಳಾವಕಾಶ ನೀಡಲು ಮುಂದಾದ ಸಿಖ್​ ಸಂಘಟನೆ..!

ಕಳೆದ ಕೆಲ ವರ್ಷಗಳಿಂದ ಬಲಪಂಥೀಯ ಸಂಘಟನೆಗಳು ಹಾಗೂ ಸ್ಥಳೀಯ ನಿವಾಸಿಗಳ ಪ್ರತಿಭಟನೆಯಿಂದಾಗಿ ನಮಾಜ್​ ಮಾಡಲು ಪರದಾಡುತ್ತಿದ್ದ ಮುಸ್ಲಿಮರ ಕಷ್ಟ ಅರಿತ ಗುರುಗಾಂವ್​ನ ಸಮಿತಿಯೊಂದು ಮುಸ್ಲಿಮರಿಗೆ ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸಲು ಸ್ಥಳಾವಕಾಶ ನೀಡಲು ಮುಂದಾಗಿದೆ.

ಗುರುಗಾಂವ್‌ ನ ಗುರುದ್ವಾರ ಸಿಂಗ್​ ಸಭಾ ಸಮಿತಿಯು ಐದು ಗುರುದ್ವಾರಗಳನ್ನು ಹೊಂದಿದೆ. ಸದರ್​ ಬಜಾರ್​ ಮಂಡಿ, ಸೆಕ್ಟರ್​ 39, ಸೆಕ್ಟರ್​ 46, ಜಾಕೋಬ್​ಪುರ ಹಾಗೂ ಮಾಡೆಲ್​ ಟೌನ್​​ನಲ್ಲಿ ಮುಸ್ಲಿಮರಿಗೆ ಕೋವಿಡ್​ ಮಾರ್ಗ ಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಸಂಖ್ಯೆಯಲ್ಲಿ ನಮಾಜ್​ ಮಾಡಲು ಅವಕಾಶ ನೀಡುವಂತೆ ಸ್ಥಳೀಯ ಆಡಳಿತಗಾರರನ್ನು ಸಂಪರ್ಕಿಸುವುದಾಗಿ ಹೇಳಿದೆ.

ತೆರೆದ ಪ್ರದೇಶಗಳಲ್ಲಿ ನಮಾಜ್​ಗೆ ವಿರೋಧ ವ್ಯಕ್ತವಾಗುತ್ತಿರೋದನ್ನು ಕಂಡು ನಮಗೆ ಬೇಸರವಾಗಿದೆ. ಮುಸ್ಲಿಂ ಬಾಂಧವರಿಗೆ ಗುರುದ್ವಾರದ ಬಾಗಿಲು ಎಂದಿಗೂ ತೆರೆದಿರುತ್ತದೆ. ಶುಕ್ರವಾರದಂದು ನಮಾಜ್​ ಮಾಡಲು ಸ್ಥಳ ಸಿಗದೇ ಮುಸ್ಲಿಮರು ಪರದಾಡುತ್ತಿದ್ದರೆ ಅವರು ಗುರುದ್ವಾರಕ್ಕೆ ಆಗಮಿಸಬಹುದು ಎಂದು ಸಮಿತಿಯ ಹ್ಯಾರಿ ಸಿಂಧು ಹೇಳಿದರು.

ಪ್ರತಿಯೊಂದು ಗುರುದ್ವಾರದಲ್ಲಿಯೂ 1 ಸಾವಿರಕ್ಕೂ ಅಧಿಕ ಮಂದಿ ಪ್ರಾರ್ಥನೆ ಸಲ್ಲಿಸುವಷ್ಟು ಜಾಗವಿದೆ. ಆದರೆ ಕೋವಿಡ್​ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ನಮಾಜ್​ ನಡೆಸಲು ಅವಕಾಶ ನೀಡಲಾಗುವುದು ಎಂದು ಹೇಳಿದ್ರು.

ಇದೇ ವಿಚಾರವಾಗಿ ಮಾತನಾಡಿದ ಸಮಿತಿಯ ಮತ್ತೋರ್ವ ಸದಸ್ಯ, ಗುರುದ್ವಾರವು ಗುರುವಿನ ದರ್ಬಾರ್​ ಆಗಿದ್ದು ಇಲ್ಲಿ ಯಾರು ಬೇಕಿದ್ದರೂ ಬಂದು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ನಮ್ಮ ಮುಸ್ಲಿಂ ಬಾಂಧವರು ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಾವು ಅವರಿಗೆ ಸ್ಥಳಾವಕಾಶ ನೀಡುತ್ತೇವೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...