ಗುರ್ಗಾಂವ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕುರ್ಚಿಗಾಗಿ ಉದ್ಯೋಗಿಗಳಿಬ್ಬರು ಜಗಳವಾಡಿದ್ದು, ಘಟನೆಯಲ್ಲಿ ಒಬ್ಬನ ಪ್ರಾಣಕ್ಕೇ ಕುತ್ತು ಬಂದಿದೆ.
ತಮ್ಮ ಕಚೇರಿಯಲ್ಲಿ ಕುರ್ಚಿಗಾಗಿ ಜಗಳದ ನಂತರ ಸಹೋದ್ಯೋಗಿ ಗುಂಡು ಹಾರಿಸಿದ್ದಾರೆ. ರಾಮದಾ ಹೋಟೆಲ್ ಬಳಿ ಈ ಘಟನೆ ನಡೆದಿದೆ.
ಆರೋಪಿ ಹರಿಯಾಣದ ಹಿಸಾರ್ ಮೂಲದವನು. ಸಂತ್ರಸ್ತನನ್ನು 23 ವರ್ಷದ ವಿಶಾಲ್ ಎಂದು ಗುರುತಿಸಲಾಗಿದ್ದು, ಈತ ಗುರ್ಗಾಂವ್‌ನ ಸೆಕ್ಟರ್ 9 ರಲ್ಲಿ ವಾಸಿಸುತ್ತಿದ್ದನು. ಈತ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸರು ಆರೋಪಿ ಅಮನ್ ಜಂಗ್ರಾ ವಿರುದ್ಧ ಕೊಲೆ ಯತ್ನದ ದೂರು ದಾಖಲಿಸಿದ್ದಾರೆ. ಅಮನ್ ಜಾಂಗ್ರಾ ಮತ್ತು ವಿಶಾಲ್ ಅವರು ಕಚೇರಿಯಲ್ಲಿ ಕುರ್ಚಿಗಾಗಿ ಜಗಳವಾಡಿಕೊಂಡಿದ್ರು. ಮರುದಿನ ಅದೇ ಕುರ್ಚಿಯ ವಿಚಾರವಾಗಿ ಅವರು ಮತ್ತೆ ಜಗಳವಾಡಿದರು.
ಈ ವೇಳೆ ಸಂತ್ರಸ್ತ ಕಚೇರಿಯಿಂದ ಹೊರನಡೆದಿದ್ದರು. ಆಗ ಆರೋಪಿ ಅಮನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿಶಾಲ್ ಮೇಲೆ ಹಿಂದಿನಿಂದ ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.