ಬೆಂಗಳೂರು: ಸಹಾಯದ ನೆಪದಲ್ಲಿ ಮನೆಗೆ ಕರೆಸಿಕೊಂಡು ಗನ್ ಪಾಯಿಂಟ್ ನಲ್ಲಿ ಬೆದರಿಸಿ ಅತ್ಯಾಚಾರ ಎಸಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 14 ರಂದು ಆನೇಕಲ್ ಬನ್ನೇರುಘಟ್ಟ ಸಮೀಪದ ಶಾನುಭೋಗನಹಳ್ಳಿಯಲ್ಲಿರುವ ಮನೆಗೆ ಹೆಬ್ಬಾಳ ನಿವಾಸಿ 28 ವರ್ಷದ ಮಹಿಳೆಯನ್ನು ಕರೆಸಿಕೊಂಡಿದ್ದ, ಬನ್ನೇರಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.
ಫೇಸ್ಬುಕ್ ಮೂಲಕ ಮಹಿಳೆಯ ಪರಿಚಯವಾಗಿದ್ದು, ಮೊಬೈಲ್ ನಂಬರ್ ಪಡೆದು ತಾನು ಕಾರ್ಪೋರೇಟರ್ ಎಂದು ಪರಿಚಯಿಸಿಕೊಂಡಿದ್ದ ಆರೋಪಿ ಬಡವರಿಗೆ ದಿನಸಿ ಕಿಟ್ ವಿತಿರುಸ ಫೋಟೋ ಕಳಿಸಿ ತಾನು ಕಾರ್ಪೊರೇಟರ್ ಎಂದು ಹೇಳಿಕೊಂಡಿದ್ದಾನೆ. ಮಾಡೆಲಿಂಗ್ ಕೆಲಸ ಕೊಡಿಸುವಂತೆ ಮಹಿಳೆ ಮನವಿ ಮಾಡಿದ್ದು, ಹೆಬ್ಬಾಳಕ್ಕೆ ಕಾರು ಕಳುಹಿಸಿ ಮಹಿಳೆಯನ್ನು ಮನೆಗೆ ಕರೆಸಿಕೊಂಡಿದ್ದಾನೆ.
ಆಕೆಯ ಜೊತೆಗೆ ಬಂದಿದ್ದ ಮಕ್ಕಳು ಹಾಲ್ ನಲ್ಲಿ ಆಟವಾಡುವ ವೇಳೆ ಬೆಡ್ರೂಮ್ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಮಹಿಳೆ ವಿರೋಧಿಸಿದಾಗ ತಲೆಗೆ ಗನ್ ಇಟ್ಟು ಬೆದರಿಸಿ ಬೆತ್ತಲೆ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ. ಆರೋಪಿ ಇದೇ ರೀತಿ ಹಲವು ಮಹಿಳೆಯರಿಗೆ ವಂಚಿಸಿರುವ ಆರೋಪ ಕೇಳಿಬಂದಿದ್ದು, ಆರೋಪಿ ಮತ್ತು ಕಾರ್ ಚಾಲಕನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.