
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಯಾಚನೆ ವೇಳೆ ಭದ್ರತಾ ವೈಫಲ್ಯ ನಡೆದಿದೆ. ಗನ್ ಇಟ್ಟುಕೊಂಡಿದ್ದ ವ್ಯಕ್ತಿ ಮುಖ್ಯಮಂತ್ರಿಗೆ ಹಾರ ಹಾಕಿದ್ದಾರೆ.
ಬೆಂಗಳೂರಿನ ಭೈರಸಂದ್ರದಲ್ಲಿ ಪ್ರಚಾರದ ವೇಳೆ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಚಾರ ನಡೆಸುವ ವೇಳೆ ಸೊಂಟದಲ್ಲಿ ಗನ್ ಇಟ್ಟುಕೊಂಡ ವ್ಯಕ್ತಿಯೊಬ್ಬ ವಾಹನ ಏರಿ ಹಾರ ಹಾಕಿದ್ದಾನೆ. ಕ್ಯಾಮೆರಾಗಳಲ್ಲಿ ವ್ಯಕ್ತಿಯ ಸೊಂಟದಲ್ಲಿ ಗನ್ ಇರುವುದು ಸೆರೆಯಾಗಿದೆ. ಈ ಕುರಿತಾಗಿ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.