ಗುಲ್ಕನ್ ಬಗ್ಗೆ ನೀವು ಕೇಳಿರಬಹುದು. ಗುಲಾಬಿ ಹೂವಿನ ದಳಗಳಿಂದ ತಯಾರಾದ ಸುಗಂಧ ಭರಿತ ಜ್ಯಾಮ್. ಹಲವು ಕಂಪೆನಿಗಳು ಇಂದು ಅತ್ಯುತ್ತಮ ಗುಣಮಟ್ಟದ ಗುಲ್ಕನ್ ಗಳನ್ನು ತಯಾರಿಸುತ್ತಿವೆ. ಇವುಗಳ ಸೇವನೆಯಿಂದ ಹಲವು ರೀತಿಯ ಪ್ರಯೋಜನಗಳಿವೆ.
ಇದೊಂದು ಆಯುರ್ವೇದಿಕ್ ಔಷಧಿಯಾಗಿದ್ದು ದೇಹದಲ್ಲಿ ಪರಿಣಾಮಕಾರಿಯಾಗಿ ಆಂಟಿ ಆಕ್ಸಿಡೆಂಟ್ ಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಗುಲ್ಕನ್ ಸೇವನೆಯಿಂದ ದೇಹ ತಂಪಾಗಿರುತ್ತದೆ. ಮಹಿಳೆಯರು ಇದನ್ನು ನಿತ್ಯ ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಾಗುವ ಹೊಟ್ಟೆ ಹಾಗೂ ಬೆನ್ನಿನ ನೋವನ್ನು ತಡೆಗಟ್ಟಬಹುದು.
ಇದು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುತ್ತದೆ. ಮೊಡವೆ, ಕಪ್ಪು ಕಲೆಗಳನ್ನು ದೂರ ಮಾಡುತ್ತದೆ. ಗುಲ್ಕನ್ ನಲ್ಲಿ ಫೈಬರ್ ಅಂಶ ಹೇರಳವಾಗಿದ್ದು ನಿತ್ಯ ಇದನ್ನು ಸೇವಿಸುವುದರಿಂದ ಮಲಬದ್ಧತೆ ನಿಮ್ಮನ್ನು ಕಾಡದು. ಸಿಹಿಯಾಗಿ ರುಚಿಯಾಗಿಯೂ ಇರುವ ಇದನ್ನು ಮಕ್ಕಳೂ ಇಷ್ಟಪಟ್ಟು ಸೇವಿಸುತ್ತಾರೆ.
ಬಾಯಿಹುಣ್ಣು, ಅಲ್ಸರ್ ಸಮಸ್ಯೆಯನ್ನು ಇದು ದೂರ ಮಾಡಿ, ಚರ್ಮದ ಅಲರ್ಜಿ, ತುರಿಕೆ, ಸೋಂಕುಗಳನ್ನು ಹೋಗಲಾಡಿಸುತ್ತದೆ.