ಚಿತ್ರದುರ್ಗ ಜಿಲ್ಲೆ ಹೊಸದುರ್ಗ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಮುಖಂಡರ ನಡುವೆ ವಾಕ್ಸಮರ ನಡೆದಿದೆ.
ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ನಡುವೆ ವಾಕ್ಸಮರ ನಡೆದಿದೆ. ಲಿಂಗಮೂರ್ತಿ ಅವರ ವಿರುದ್ಧ ಗೂಳಿಹಟ್ಟಿ ಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಸ್ಥಾನ ಕೈತಪ್ಪುವ ಹಿನ್ನೆಲೆಯಲ್ಲಿ ಲಿಂಗಮೂರ್ತಿ ನಾಟಕವಾಡುತ್ತಿದ್ದಾರೆ. ಹೊಸದುರ್ಗದ ಬಿಜೆಪಿ ಟಿಕೆಟ್ ತನಗೆ ಸಿಗುತ್ತದೆ ಎಂದು ಹೇಳಿಕೊಂಡು ಓಡಾಡುವ ಮೂಲಕ ಕ್ಷೇತ್ರದಲ್ಲಿ ಗೊಂದಲ ದೃಷ್ಟಿಸಿದ್ದಾರೆ ಎಂದು ಗೂಳಿಹಟ್ಟಿ ಶೇಖರ್ ಟೀಕಿಸಿದ್ದಾರೆ.
ಚುನಾವಣೆ ಬಂದಾಗ ಅವರ ಹಣೆಬರಹ ಏನೆಂಬುದು ಗೊತ್ತಾಗುತ್ತದೆ. ಹಿಂದಿನಿಂದಲೂ ನನ್ನ ಮೇಲೆ ದಬ್ಬಾಳಿಕೆ ಮತ್ತು ಅವಮಾನ ಮಾಡುತ್ತಿದ್ದಾರೆ. ನನ್ನಿಂದ ಸಹಿಸಲಾಗುತ್ತಿಲ್ಲ, ನೋವು ಮತ್ತು ದುಃಖವಾಗುತ್ತಿದೆ. ಮೊನ್ನೆ ತಾಲೂಕು ತ್ರೈಮಾಸಿಕ ಸಭೆಗೆ ಬಂದು ನನಗೆ ಅವಮಾನ ಮಾಡಿದ್ದಾರೆ. ಅಹ್ವಾನ ಇಲ್ಲದ ಸಭೆಗೆ ಲಿಂಗಮೂರ್ತಿ ಬರಬಾರದು. ಚುನಾವಣೆ ಬಂದಾಗ ಲಿಂಗಮೂರ್ತಿ ತಾಕತ್ತು ನೋಡೋಣ. ನಾನು ಪಕ್ಷೇತರರಾಗಿ ಸ್ಪರ್ಧಿಸಿ ತಾಕತ್ತು ತೋರಿಸುತ್ತೇನೆ. ಅವರಿಗೆ ತಾಕತ್ತಿದ್ದರೆ ಯಡಿಯೂರಪ್ಪ ಹೆಸರು ಹೇಳದೆ ಸ್ಪರ್ಧೆ ಮಾಡಲಿ. ಪಕ್ಷೇತರರಾಗಿ ಸ್ಪರ್ಧಿಸಿ ಹತ್ತರಿಂದ ಇಪ್ಪತ್ತು ಸಾವಿರ ಮತ ಪಡೆಯಲಿ. ನಾನು ಪಕ್ಷೇತರನಾಗಿ ಕಣಕ್ಕಿಳಿದು ನನ್ನ ಶಕ್ತಿ ತೋರಿಸುತ್ತೇನೆ. ಆಗ ಇಬ್ಬರೂ ಸೋತು ಮೂರನೆಯವರಿಗೆ ಲಾಭ ಆಗುತ್ತದೆ ಎಂದು ಗೂಳಿಹಟ್ಟಿ ಶೇಖರ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
https://fb.watch/aDi8aVSb0_/