ಪಾಲನ್‌ಪುರ್: ಜನಪದ ಸಂಗೀತಕ್ಕೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಕೆಲವೊಮ್ಮೆ ಅಭಿಮಾನವು ಅತಿರೇಕಕ್ಕೆ ಹೋಗುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ.
ಗುಜರಾತಿನ ಪಾಲನ್‌ಪುರ್‌ನಲ್ಲಿ ನಡೆದ ಧಾರ್ಮಿಕ ಉತ್ಸವದಲ್ಲಿ ಗುಜರಾತಿ ಜಾನಪದ ಗಾಯಕನೊಬ್ಬನಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಲಕ್ಷ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಯಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ, ಸ್ಥಳೀಯ ಜಾನಪದ ಕಲಾವಿದ ಕೀರ್ತಿದನ್ ಗಧ್ವಿ ಜಲರಾಮ್ ದೇವಾಲಯದ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಸಂಜೆ ಕಾರ್ಯಕ್ರಮವೊಂದರಲ್ಲಿ ಭಕ್ತಿಗೀತೆಯನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಮೂರು ದಿನಗಳ ಉತ್ಸವದ ಎರಡನೇ ದಿನ ತಡರಾತ್ರಿ ಕಾರ್ಯಕ್ರಮ ನಡೆಯಿತು. ವಿಡಿಯೋದಲ್ಲಿ ಕೀರ್ತಿದನ್ ಹಾರ್ಮೋನಿಯಂ ನುಡಿಸುವುದನ್ನು ಕಾಣಬಹುದು.
ಗಾಯಕನಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಮತ್ತು ಲಕ್ಷ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಯಾಯಿತು.