ಆತ ರಾಜ್ಯ ಮಟ್ಟದ ಕುಸ್ತಿಪಟು ಅಖಾಡಕ್ಕೆ ಇಳಿದನೆಂದರೆ ಮುಗೀತು, ಎದುರಾಳಿಯನ್ನು ನೆಲಕ್ಕುರುಳಿಸೋ ತನಕ ನಿಟ್ಟುಸಿರು ಬಿಡ್ತಿರಲಿಲ್ಲ. ಚಿನ್ನದ ಪದಕವನ್ನೂ ಕೂಡಾ ಆತ ಗೆದ್ದಿದ್ದ, ಅದೇ ಕುಸ್ತಿ ಪಟುವಿನ ಮತ್ತೊಂದು ಭಯಾನಕ ರೂಪ ಈಗ ಬಯಲಾಗಿದೆ.
ಮಾಸ್ಕ್ ಹಾಕಿಕೊಂಡು ಮಹಿಳೆಯರನ್ನ ಟಾರ್ಗೆಟ್ ಮಾಡುತ್ತಿದ್ದ ಕೌಶಲ್ ಪಿಪಲಿಯಾ ವಯಸ್ಸು 24. 2016, 2017, 2018ರಲ್ಲಿ ರಾಜ್ಯಮಟ್ಟದ 74 ಕೆ.ಜಿ. ತೂಕದ ಫ್ರಿಸ್ಟೈಲ್ ರೇಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿಪಟು ಈತ.
ಮಹಿಳೆಯೋರ್ವರು ಕೊಟ್ಟ ದೂರಿನ ಆಧಾರದ ಮೇಲೆ ಈತನನ್ನ ಬಂಧಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಬಾಯ್ಬಿಟ್ಟ ಒಂದೊಂದು ವಿಷಯ ಅಲ್ಲಿದ್ದವರನ್ನು ಬೆಚ್ಚಿಬೀಳಿಸಿತ್ತು.
ಈತ ಪೊಲೀಸರ ಮುಂದೆ ತಾನು ಮಾಡಿದ ಕರ್ಮಕಾಂಡವೆಲ್ಲ ಒಪ್ಪಿಕೊಂಡಿದ್ದು, ಏನಿಲ್ಲ ಅಂದರೂ 100ಕ್ಕೂ ಹೆಚ್ಚು ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಟ್ಟಿರೋದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟೆ ಅಲ್ಲ ಎಲ್ಲಾದರೂ ಮಹಿಳೆಯರು ಒಬ್ಬಂಟಿಯಾಗಿ ಓಡಾಡೋದು ಗೊತ್ತಾದ್ರೆ ಸಾಕು, ಬೈಕ್ ಮೇಲೆ ಅವರ ಹಿಂದಿಂದೆ ಹೋಗಿ, ಹೊಡೆಯುವುದು, ಗಿಂಡುವುದು, ಚುಡಾಯಿಸುವುದು ಹಾಗೂ ಅಸಹ್ಯಕರ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.