ಗುಜರಾತ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ನಾಯಿಗೆ ಸೋನು ಎಂದು ಹೆಸರಿಟ್ಟಿದ್ದೇ ತಪ್ಪಾಗಿದೆ. ಕೋಪಗೊಂಡ ಸ್ಥಳೀಯರು ಮಹಿಳೆಗೆ ಬೆಂಕಿ ಹಚ್ಚಿದ್ದಾರೆ. ಮಹಿಳೆ ಪರಿಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನೀತಾಬೆನ್ ಸರ್ವಯ್ಯ ಸದ್ಯ, ಭಾವನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನೀತಾಬೆನ್ ಸರ್ವಯ್ಯ, ತನ್ನ ನಾಯಿಗೆ ಸೋನು ಎಂದು ಹೆಸರಿಟ್ಟಿದ್ದಳಂತೆ. ಸೋನು ಎಂಬುದು ನಿತಾಬೆನ್ ಸರ್ವಯ್ಯ ನೆರೆಮನೆಯಲ್ಲಿ ವಾಸಿಸುವ ಸುರಭಾಯ್ ಭಾರವಾಡ್ ಹೆಂಡತಿಯ ಹೆಸರೂ ಆಗಿದೆ. ಅದೇ ವಿಷಯ ಸುರಭಾಯಿ ಭಾರವಾಡರಿಗೆ ಇಷ್ಟವಾಗಲಿಲ್ಲ. ತನ್ನ ಕೆಲವು ಸಹಚರರೊಂದಿಗೆ ಸುರಭಾಯಿ ಹಲ್ಲೆ ನಡೆಸಿದ್ದಾನೆ.
ನಿತಾಬೆನ್, ಪತಿ ಮತ್ತು ಇಬ್ಬರು ಪುತ್ರರು ಸೋಮವಾರ ಮಧ್ಯಾಹ್ನ ಯಾವುದೋ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು. ನಿತಾಬೆನ್ ತನ್ನ ಕಿರಿಯ ಮಗನೊಂದಿಗೆ ಮನೆಯಲ್ಲಿದ್ದಳು. ಈ ವೇಳೆ ಅಲ್ಲಿಗೆ ಬಂದ ಸುರಭಾಯ್, ನಿತಾಬೆನ್ ಗೆ ಬೈದಿದ್ದಾನೆ. ನಂತ್ರ ಅಡುಗೆ ಮನೆಯಲಿದ್ದ ನಿತಾಬೆನ್ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಕಂಬಳಿ ಸಹಾಯದಿಂದ ನಿತಾಬೆನ್ ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.