ತನ್ನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸಿದ ಹಾಗೂ ತನ್ನ ಐದು ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ ಘಟನೆ ಗುಜರಾತ್ನ ವಡೋದರಲ್ಲಿ ನಡೆದಿದೆ.
ದೂರಿನಲ್ಲಿರುವ ಮಾಹಿತಿಯ ಪ್ರಕಾರ, ಮಹಿಳೆಯ ಪತಿಯನ್ನು ಸರಗಳ್ಳತನ ಆರೋಪದ ಅಡಿಯಲ್ಲಿ ಬಂಧಿಸಲಾಗಿತ್ತು. ಲಾಲಾ ಪಟೇಲ್ ಎಂಬಾತ ತನ್ನನ್ನು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆತನ ತಂದೆ ರಂಚೋಡ್ ಪಟೇಲ್ ತಮ್ಮ ಪತಿಯ ಜೈಲಿನಲ್ಲಿ ಇದ್ದಾನೆ ಎಂದು ಮಹಿಳೆ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಮಹಿಳೆ ನೀಡಿರುವ ಮಾಹಿತಿಯ ಪ್ರಕಾರ ಬುಧವಾರ ಸಂಜೆ ಮನೆ ಬಳಿಗೆ ಬಂದ ಲಾಲಾ ಪಟೇಲ್ ತನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿಯೇ ತನ್ನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸಿದ್ದಾನೆ. ಈ ಸಮಯದಲ್ಲಿ ನನ್ನ ಇಬ್ಬರು ಮಕ್ಕಳು ಕಾರಿನಲ್ಲಿಯೇ ಇದ್ದರು. ಆತ ನನ್ನ ಅಪ್ರಾಪ್ತ ಮಗಳಿಗೆ ಲೈಂಗಿಕ ಕ್ರಿಯೆ ನೀಡಿದ್ದಾನೆ ಎಂದಿದ್ದಾರೆ.
ದೂರುದಾರ ಮಹಿಳೆ ತನ್ನ ಪತಿಯ ಪೋಷಕರು ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಬಂಧನದ ಸಂಬಂಧ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.