alex Certify OMG: 70 ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: 70 ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ದೆ…!

70 ವರ್ಷದ ವೃದ್ಧೆಯೊಬ್ಬರು ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ ಆಶ್ಚರ್ಯಕರ ಘಟನೆಯೊಂದು ಗುಜರಾತ್​ನಲ್ಲಿ ನಡೆದಿದೆ. ವಿವಾಹವಾಗಿ ಬರೋಬ್ಬರಿ 45 ವರ್ಷಗಳ ಬಳಿಕ ಈ ದಂಪತಿ ಪೋಷಕರಾಗಿ ಬಡ್ತಿ ಪಡೆದಿದ್ದಾರೆ.

ಈ ಮೂಲಕ ಈ ವೃದ್ಧೆಯು ವಿಶ್ವದಲ್ಲೇ ಅತ್ಯಂತ ಹಿರಿಯ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ ಎನಿಸಿದ್ದಾರೆ. ಜೀವೂಬೆನ್​ ಎಂಬ ಹೆಸರಿನ ವೃದ್ಧೆ ಮದುವೆಯಾಗಿ 45 ವರ್ಷಗಳ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ. ಜೀವೂಬೆನ್​ಗೆ 70 ವರ್ಷ ವಯಸ್ಸಾಗಿದ್ದರೆ ಈಕೆಯ ಪತಿ ಮಾಲಧಾರಿ 75 ವರ್ಷದವರಾಗಿದ್ದಾರೆ.

ಇಳಿ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಕಾರಣಕ್ಕಾಗಿ ಈ ದಂಪತಿ ಭಾರೀ ಮಟ್ಟದಲ್ಲಿ ಸುದ್ದಿಯಾಗ್ತಿದ್ದಾರೆ. ಜೀವೂಬೆನ್​ ಐವಿಎಫ್​ ತಂತ್ರಜ್ಞಾನದ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜೀವೂಬೆನ್​ ಹಾಗೂ ಮಾಲಾಧಾರಿ ದಂಪತಿ ಗುಜರಾತ್​ನ ಸಣ್ಣ ಗ್ರಾಮವಾದ ಮೋರಾದ ನಿವಾಸಿಯಾಗಿದ್ದಾರೆ.

ಮದುವೆಯಾಗಿ ಇಷ್ಟು ವರ್ಷಗಳ ಬಳಿಕ ಮಗು ಜನಿಸಿರುವ ಬಗ್ಗೆ ಈ ದಂಪತಿ ಹರ್ಷ ವ್ಯಕ್ತಪಡಿಸ್ತಾ ಇದ್ದಾರೆ. ತಾಯಿ ಹಾಗೂ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

45 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಜೀವೂಬೆನ್​ ಹಾಗೂ ಮಾಲಾಧಾರಿಗೆ ಮಕ್ಕಳ ಭಾಗ್ಯ ದೊರಕಿರಲಿಲ್ಲ. ಐವಿಎಫ್​ ತಂತ್ರಜ್ಞಾನದ ಮೂಲಕ ಡಾ. ನರೇಶ್​ ಭಾನುಶಾಲಿ ಈ ದಂಪತಿಗೆ ಇಳಿವಯಸ್ಸಿನಲ್ಲಿ ಪೋಷಕರಾಗುವ ಭಾಗ್ಯ ನೀಡಿದ್ದಾರೆ.

ಈ ಮೂಲಕ ಜೀವೂಬೆನ್​ ಅತ್ಯಂತ ಹಿರಿಯ ವಯಸ್ಸಿಗೆ ಮಗುವಿಗೆ ಜನ್ಮ ನೀಡಿದ ಮಹಿಳೆಯ ಎನಿಸಿದ್ದಾರೆ.

2009ರಲ್ಲಿ ಅತಿ ಹಿರಿಯ ವಯಸ್ಸಿಗೆ ಮಗುವಿಗೆ ಜನ್ಮ ನೀಡಿದ ಮಹಿಳೆ ಎಂಬ ಕೀರ್ತಿಗೆ ಯುರೋಪ್​​ನ ಎಲಿಜಬೆತ್​​ ಎಡಿನಿ ಎಂಬವರು ಪಾತ್ರರಾಗಿದ್ದರು. ಇವರು 50ನೇ ವಯಸ್ಸಿಗೆ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಈ ದಾಖಲೆಯನ್ನು ಜೀವೂಬೆನ್​ ಮುರಿದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...