ಗುಜರಾತ್ನ ವಲ್ಸಾದ್ ಹೋಟೆಲ್ನಲ್ಲಿ ವ್ಯಕ್ತಿಯೊಬ್ಬ ಪ್ರಿಯತಮೆಯ ಜೊತೆಗಿದ್ದಾಗಲೇ ಮನೆಯವರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಪತ್ನಿ ಮತ್ತು ಹೆಣ್ಣು ಮಕ್ಕಳು ಸೇರಿಕೊಂಡು ಆತನನ್ನು ಹಿಡಿದಿದ್ದು, ಕುಟುಂಬದವರೆಲ್ಲ ಸೇರಿಕೊಂಡು ವ್ಯಕ್ತಿ ಹಾಗೂ ಆತನ ಗೆಳತಿಯನ್ನು ಥಳಿಸಿದ್ದಾರೆ.
ವಲ್ಸಾದ್ ಪ್ರದೇಶದ ಹೋಟೆಲ್ನಲ್ಲಿ ‘ವಿವಾಹೇತರ’ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ವ್ಯಕ್ತಿಯೊಬ್ಬ ಏಕಾಂತದಲ್ಲಿದ್ದಾಗಲೇ ಆತನ ಕುಟುಂಬದವರು ಎಂಟ್ರಿಕೊಟ್ಟಿದ್ದಾರೆ. ಧರಂಪುರ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯ ಪತ್ನಿ ಮತ್ತು ಮಗಳು, ಸಂಬಂಧಿಕರು ಹೋಟೆಲ್ ರೂಮ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆ ವ್ಯಕ್ತಿ ತನ್ನ ಗೆಳತಿಯೊಂದಿಗೆ ‘ಎಂಜಾಯ್’ ಮಾಡುತ್ತಿದ್ದ.
ಕುಟುಂಬದವರು ಆತನನ್ನು ಥಳಿಸಿದ್ದು ಮಾತ್ರವಲ್ಲದೆ, ಮಹಿಳೆಯನ್ನು ಕೂಡ ಥಳಿಸಿ ಮತ್ತು ಆಕೆಯ ಬಟ್ಟೆಗಳನ್ನು ಹರಿದುಹಾಕಿದ್ದಾರೆ. ಅಲ್ಲದೇ ಗಂಡನ ಜೊತೆಗಿದ್ದ ಮಹಿಳೆಯನ್ನು ಬಟ್ಟೆ ಇಲ್ಲದೆ ಕೊಠಡಿಯ ಹೊರಗೆ ಹೋಗುವಂತೆ ಒತ್ತಾಯಿಸಿದ್ದಾರೆ. ಸ್ಥಳೀಯ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.